ಮಡಿಕೇರಿ, ಡಿ. 3: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಮೈದಾನದಲ್ಲಿ ಆಯೋಜಿತವಾಗಿದ್ದ ರೋಟರಿ ಜಿಲ್ಲೆ 3181ನ ಜಿಲ್ಲಾಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಮಿಸ್ಟಿ ಹಿಲ್ಸ್‍ನ ನಿರ್ದೇಶಕ ಕುಲ್ಲೇಟಿರ ಅಜಿತ್ ನಾಣಯ್ಯ ನಾಲ್ಕು ಬಹುಮಾನಗಳನ್ನು ಪಡೆದಿದ್ದಾರೆ.
ಜಿಲ್ಲಾ ರೋಟರಿ ಕ್ರೀಡಾಕೂಟದಲ್ಲಿ ಆಯೋಜಿತವಾಗಿದ್ದ 50 ವಯೋಮಾನದ ನಂತರದ ವಿಭಾಗದವರ 400 ಮೀಟರ್ ನಡಿಗೆ, 50 ಮೀಟರ್ ಉದ್ದ ಜಿಗಿತ, ಶಾಟ್‍ಪುಟ್ ವಿಭಾಗಗಳಲ್ಲಿ ಕುಲ್ಲೇಟಿರ ಅಜಿತ್ ನಾಣಯ್ಯ ಚಿನ್ನದ ಪದಕ ಪಡೆದಿದ್ದಾರೆ. ಸ್ಪಾಟ್‍ಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಕುಲ್ಲೇಟಿರ ಅಜಿತ್ ನಾಣಯ್ಯ ರೋಟರಿ ವಲಯ 6ರ ಕ್ರೀಡಾ ಸಮಿತಿ ಸಂಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಿಸ್ಟಿ ಹಿಲ್ಸ್ ಪ್ರಕಟಣೆ ತಿಳಿಸಿದೆ.