ಮಡಿಕೇರಿ, ಡಿ. 3: ಕೊಡವ ಮಕ್ಕಡ ಕೂಟದ ವತಿಯಿಂದ ತಾ. 6 ರಂದು ಹುದಿಕೇರಿ ಕೊಡವ ಸಮಾಜದಲ್ಲಿ ಕೂಟದ ವತಿಯಿಂದ ಹೊರತರಲಾಗಿರುವ 35ನೇ ಪುಸ್ತಕವನ್ನು ಲೋಕಾರ್ಪಣೆ ಗೊಳಿಸಲಾಗುವದು ಎಂದು ಕೂಟದ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ತಿಳಿಸಿದ್ದಾರೆ.

ಕೊಡವ ಮಕ್ಕಡ ಕೂಟದಿಂದ ಲೇಖಕಿ ಕಾಡ್ಯಮಾಡ ರೀಟಾ ಬೋಪಯ್ಯ ಅವರ ‘ಮಾವೀರ ಅಚ್ಚುನಾಯಕ’ ಪುಸ್ತಕವನ್ನು ಇದೀಗ ಕನ್ನಡ ಭಾಷೆಗೆ ಭಾಷಾಂತರಗೊಳಿಸಿ ಬಿಡುಗಡೆ ಗೊಳಿಸಲಾಗುತ್ತಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋದಂಡ ಸನ್ನು ಉತ್ತಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ಅತಿಥಿಗಳಾಗಿ ಸಮಾಜ ಸೇವಕ ಅಜ್ಜಿಕುಟ್ಟೀರ ಭೀಮಯ್ಯ, ಹುದಿಕೇರಿ ಕೊಡವ ಸಮಾಜದ ಮಾಜಿ ಅಧ್ಯಕ್ಷ, ಅರಣ್ಯ ನಿಗಮ ಮಂಡಳಿ ಮಾಜಿ ನಿರ್ದೇಶಕ ಚೆಕ್ಕೇರ ವಾಸು ಕುಟ್ಟಪ್ಪ, ಲೇಖಕಿ ಕಾಡ್ಯಮಾಡ ರೀಟಾ ಬೋಪಯ್ಯ, ಹುದಿಕೇರಿ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಮಂಡಂಗಂಡ ಅಶೋಕ್, ಕಾರ್ಯಕ್ರಮದ ಸಂಚಾಲಕ ಹಾಗೂ ಕೊಡವ ಮಕ್ಕಟ ಕೂಟದ ಉಪಾಧ್ಯಕ್ಷ ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.ಕಾರ್ಯಕ್ರಮದಲ್ಲಿ ಕೊಡವ ಮಕ್ಕಡ ಕೂಟದಿಂದ ಸಮಾಜ ಸೇವಕ ಅಜ್ಜಿಕುಟ್ಟೀರ ಭೀಮಯ್ಯ ಹಾಗೂ ಲೇಖಕಿ ಕಾಡ್ಯಮಾಡ ರೀಟಾ ಬೋಪಯ್ಯ ಅವರನ್ನು ಸನ್ಮಾನಿಸಲಾಗುವದು ಎಂದು ತಿಳಿಸಿದ್ದಾರೆ.

ಚಲನಚಿತ್ರ ಪ್ರದರ್ಶನ: ಸಭಾ ಕಾರ್ಯಕ್ರಮದ ನಂತರ ಮೂರು ಪ್ರದರ್ಶನ ಏರ್ಪಡಿಸಲಾಗಿದ್ದು, ಬೆಳಿಗ್ಗೆ 11, ಮಧ್ಯಾಹ್ನ 2 ಹಾಗೂ ಸಂಜೆ ಆರು ಗಂಟೆಗೆ ಕೊಡಗ್‍ರ ಸಿಪಾಯಿ ಚಿತ್ರ ಪ್ರದರ್ಶನ ನಡೆಯಲಿದೆ. ಚಿತ್ರ ವಿತರಕರಾದ ಅಚಿಯಂಡ ಗಗನ್ ಗಣಪತಿ, ಪ್ರತೀಶ್ ಪೂವಯ್ಯ ಹಾಗೂ ಚಿತ್ರ ತಂಡದವರು ಪಾಲ್ಗೊಳ್ಳಲಿದ್ದಾರೆ ಎಂದು ಕಾಳಯ್ಯ ತಿಳಿಸಿದ್ದಾರೆ.