ಮಡಿಕೇರಿ, ಡಿ. 3: ಕೇಂದ್ರ ಸರ್ಕಾರದಿಂದ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿರುವ ಪೋಷಣ್ ಅಭಿಯಾನ ಯೋಜನೆಯಡಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಿದ್ಯಾರ್ಹತೆ ನಿಗದಿಪಡಿಸಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಸಂಯೋಜಕರು 1 ಹುದ್ದೆ; ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ ಅಥವಾ ಐ.ಟಿ. ಪದವಿ, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಐ.ಟಿ. ಪಡೆದಿರಬೇಕು. ಅಪ್ಲಿಕೇಷನ್ ಮೆಂಟೆನೆನ್ಸ್ ಅಂಡ್ ಸಪೋರ್ಟ್ನಲ್ಲಿ ಕನಿಷ್ಟ 2 ವರ್ಷಗಳ ಅನುಭವ ಹೊಂದಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕ್ಷೇತ್ರ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು. ಕಡ್ಡಾಯವಾಗಿ ಸ್ಥಳೀಯ ಅಭ್ಯರ್ಥಿಯಾಗಿರಬೇಕು. ಗೌರವಧನ ರೂ. 30 ಸಾವಿರ ಮಾಹೆಯಾನ.
ಜಿಲ್ಲಾ ಯೋಜನಾ ಸಹಾಯಕರು 1 ಹುದ್ದೆ; ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಸಮಾಜ ವಿಜ್ಞಾನ/ ಸಮಾಜ ಕಾರ್ಯ/ ನ್ಯೂಟ್ರಿಷನ್ ಇವುಗಳಲ್ಲಿ ಯಾವುದಾದರೊಂದು ಪದವಿ ಪಡೆದಿರಬೇಕು ಅಥವಾ ಪಿ.ಜಿ. ಡಿಪ್ಲೋಮಾ ಇನ್ ಮ್ಯಾನೇಜ್ಮೆಂಟ್/ ಸೋಶಿಯಲ್ ಸೈನ್ಸ್/ ನ್ಯೂಟ್ರಿಷನ್ ಪಡೆದಿರಬೇಕು. ಕನಿಷ್ಟ 2 ವರ್ಷಗಳು ಮೇಲ್ವಿಚಾರಣಾ ಕೌಶಲ್ಯದೊಂದಿಗೆ ಸಾಮರ್ಥ ಅಭಿವೃದ್ಧಿ ಕೆಲಸ ನಿರ್ವಹಿಸಿದ ಅನುಭವ ಇರಬೇಕು. ಇಂಟರ್ನೆಟ್ ಮತ್ತು ಇ-ಮೇಲ್ ಬಳಕೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕ್ಷೇತ್ರ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು. ಕಡ್ಡಾಯವಾಗಿ ಸ್ಥಳೀಯ ಅಭ್ಯರ್ಥಿಯಾಗಿರಬೇಕು. ಗೌರವಧನ ರೂ. 18 ಸಾವಿರ ಮಾಹೆಯಾನ.
ತಾಲೂಕು ಸಂಯೋಜಕರು 3 ಹುದ್ದೆಗಳಿಗೆ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ ಅಥವಾ ಐ.ಟಿ. ಪದವಿ ಅಥವಾ ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಪದವಿ ಪಡೆದಿರಬೇಕು. ಟೆಕ್ನಾಲಜಿ ಅಂಡ್ ಸಾಫ್ಟ್ವೇರ್ ಅಪ್ಲಿಕೇಷನ್ ಸಪೋರ್ಟ್ನಲ್ಲಿ ಕನಿಷ್ಟ 2 ವರ್ಷಗಳು ಕೆಲಸ ನಿರ್ವಹಿಸಿದ ಅನುಭವ ಇರಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕ್ಷೇತ್ರ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು. ಕಡ್ಡಾಯವಾಗಿ ಸ್ಥಳೀಯ ಅಭ್ಯರ್ಥಿಯಾಗಿರಬೇಕು. ಗೌರವಧನ ರೂ. 20 ಸಾವಿರ ಮಾಹೆಯಾನ.
ತಾಲೂಕು ಯೋಜನಾ ಸಹಾಯಕರು 3 ಹುದ್ದೆಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಸಮುದಾಯದೊಂದಿಗೆ ಅಥವಾ ಸ್ಥಳೀಯ ಸಂಸ್ಥೆಗಳೊಂದಿಗೆ ಕನಿಷ್ಟ 1 ವರ್ಷ ಕೆಲಸ ನಿರ್ವಹಿಸಿದ ಅನುಭವ. ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಕ್ಷೇತ್ರ ಕಾರ್ಯ ನಿರ್ವಹಿಸಲು ಸಿದ್ಧರಿರಬೇಕು. ಕಡ್ಡಾಯವಾಗಿ ಸ್ಥಳೀಯ ಅಭ್ಯರ್ಥಿಯಾಗಿರಬೇಕು. ಗೌರವಧನ ರೂ. 15 ಸಾವಿರ ಮಾಹೆಯಾನ.
ಈ ಹಿಂದೆ ಉತ್ತಮವಾಗಿ ಕೆಲಸ ನಿರ್ವಹಿಸಿರುವ ಬಗ್ಗೆ ದಾಖಲೆ ಹೊಂದಿರುವ ಹಾಗೂ ಕನಿಷ್ಟ ಉಸ್ತುವಾರಿಯಲ್ಲಿ ಉತ್ತಮ ಕೆಲಸ ನಿರ್ವಹಿಸಬಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವದು. ಉತ್ತಮವಾಗಿ ಪತ್ರ ವ್ಯವಹಾರ ನಿರ್ವಹಿಸಬಲ್ಲ ಹಾಗೂ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಓದುವ, ಬರೆಯುವ, ಮಾತನಾಡುವ, ಗಣಕಯಂತ್ರದಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ. ಈ ನೇಮಕಾತಿಯು 11 ತಿಂಗಳ ಅವಧಿಯದಾಗಿದ್ದು, ಕೆಲಸ ನಿರ್ವಹಣೆಯ ಆಧಾರದ ಮೇರೆಗೆ ನವೀಕರಿಸಲಾಗುವದು.
ಆಸಕ್ತ ಅರ್ಹ ಅಭ್ಯರ್ಥಿಗಳು ಸ್ವ ವಿವರಗಳುಳ್ಳ ಮಾಹಿತಿಯನ್ನು ನಿಗದಿತ ವಿದ್ಯಾರ್ಹತೆಯ ಅಂಕಪಟ್ಟಿಗಳು ಮತ್ತು ಅನುಭವ ಪ್ರಮಾಣ ಪತ್ರಗಳೊಂದಿಗೆ ತಾ. 13 ರೊಳಗೆ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ 571201 ಈ ವಿಳಾಸಕ್ಕೆ ಸಲ್ಲಿಸುವಂತೆ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ತಿಳಿಸಿದ್ದಾರೆ.