ಮಡಿಕೇರಿ, ಡಿ. 1: ಚಾಮುಂಡೇಶ್ವರಿನಗರ ನಿವಾಸಿ ಆರ್.ಆರ್. ಮನೋಜ್ ಎಂಬವರ ಮೋಟಾರ್ ಬೈಕ್ ಶನಿವಾರ ರಾತ್ರಿ ಕಳುವಾಗಿದೆ. ಮನೆ ಸಮೀಪ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿರುವ ಬಗ್ಗೆ ಮಡಿಕೇರಿ ಠಾಣೆಗೆ ದೂರು ನೀಡಿದ್ದಾರೆ. ಆ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕಳ್ಳರ ಪತ್ತೆಗಾಗಿ ಸಿಸಿ. ಕ್ಯಾಮರಾ ಇತ್ಯಾದಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.