ಸುಂಟಿಕೊಪ್ಪ, ಡಿ. 2: ಸುಂಟಿಕೊಪ್ಪ ಸಂತ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವವು ತಾ.4 ರಂದು ಸಂಜೆ 4.30 ಗಂಟೆಗೆ ಮೈಸೂರಿನ ಧರ್ಮಾಧ್ಯಕ್ಷರು ಹಾಗೂ ಎಂಡಿಇಎಸ್‍ನ ಅಧ್ಯಕ್ಷ ರೆವರೆಂಡ್ ಡಾ. ಕೆ.ಎ.ವಿಲಿಯಂ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಎಪಿಸ್‍ಸ್ಕೋಪಲ್ ವಿಕಾರ್ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯ ಲೆಸ್‍ಲ್ಲಿ ಮೋರಸ್, ಎಂಡಿಇಎಸ್ ಕಾರ್ಯದರ್ಶಿ ರೆವರೆಂಡ್ ಫಾದರ್ ವಿಜಯಕುಮಾರ್, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಫಾದರ್ ಮದಲೈಮುತ್ತು ಆಗಮಿಸಲಿರುವರು.

ಗೌರವ ಅತಿಥಗಳಾಗಿ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಸಂತ ಅಂತೋಣಿ ಶಾಲೆಯ ಮುಖ್ಯೋಪಾದ್ಯಾಯಿನಿ ವೀರಾ ಡಿಸೋಜ, ಸುಂಟಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ, ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಗುಡ್ಡೆಹೊಸೂರು ಕ್ಷೇತ್ರದ ಜಿ.ಪಂ.ಸದಸ್ಯ ಪಿ.ಎಂ.ಲತೀಫ್, ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪೆರಿಗ್ರಿನ್ ಎಸ್.ಮಚ್ಚಾಡೊ ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಭಾಗವಹಿಸಲಿರುವರು.