ಮಡಿಕೇರಿ, ಡಿ. 2: ಸರಕಾರದ ವಿವಿಧ ಸೌಲಭ್ಯಕ್ಕಾಗಿ ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮುಂತಾದವುಗಳಿಗೆ ರೂ. 10 ಶುಲ್ಕದೊಂದಿಗೆ; ಪಡೆದುಕೊಳ್ಳಲು ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ. ಇಂತಹ ಚೀಟಿಗಳನ್ನು ಪಡೆಯಲು ತೆರಳಿದರೆ ಕೆಲವೆಡೆ ರೂ. 50, 100, 200, 300 ಮೊತ್ತವನ್ನು ಪಡೆದು ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿರುವ ದೂರುಗಳು ಕೇಳಿ ಬಂದಿದೆ. ಈ ಸಂಬಂಧ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಳಚಂಡ ಅಪ್ಪಣ್ಣ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.