ಮಡಿಕೇರಿ, ಡಿ. 2: ಬೆಂಗಳೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಹಾಗೂ ಒಕ್ಕಲಿಗ ಗೌಡ ಜನಾಂಗ ಬಾಂಧವರ ಭಾವೀ ವಧೂ-ವರರ ಮುಖಾಮುಖಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ತಾ. 8 ರಂದು ಲಗ್ಗೆರೆಯಲ್ಲಿರುವ ಗೌಡ ಸಮಾಜದ ನಮ್ಮನೆ ಸಾಂಸ್ಕøತಿಕ ಕಲಾ ಕೇಂದ್ರದಲ್ಲಿ ಬೆಳಿಗ್ಗೆ 9.30 ರಿಂದ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಗೀತಾ ರವೀಂದ್ರನಾಥ್ ಕೇವಳ (9481454923), ಶಶಿಪ್ರಭ ಮಡ್ತಿಲ (9008949543), ಪೋರೆಯನ ಜ್ಯೋತಿ ಕುಶಾಲಪ್ಪ (9886918229), ಕಟ್ರತನ ಲತಾ ರಾಜೇಶ್ (9980627068) ಇವರುಗಳನ್ನು ಸಂಪರ್ಕಿಸಬಹುದಾಗಿದೆ.