ನಾಪೆÇೀಕ್ಲು, ಡಿ. 1: ನಾಲ್ಕುನಾಡು ಮುಸ್ಲಿಂ ಜಮಾಅತ್ ಒಕ್ಕೂಟದ ವತಿಯಿಂದ ನಾಪೆÇೀಕ್ಲುವಿನಲ್ಲಿ ನಡೆದ 2ನೇ ವರ್ಷದ ‘ಮಾನವ ಕುಲಕ್ಕೆ ವಿಶ್ವ ಪ್ರವಾದಿಯ ಶಾಂತಿಯ ಸಂದೇಶ’ ರ್ಯಾಲಿ ಹಾಗೂ ಸಾರ್ವಜನಿಕ ಸೌಹಾರ್ದ ಸಮ್ಮೇಳನ ನಡೆಯಿತು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಮಂತ್ರಿ ಯಂ.ಸಿ. ನಾಣಯ್ಯ ಅವರು ಎಲ್ಲಾ ಧರ್ಮಗಳ ಸಾರವು ಶಾಂತಿಯ ಸಂದೇಶವಾಗಿದೆ. ಭಗವದ್ಗೀತೆ, ಕುರಾನ್, ಬೈಬಲ್ ಸೇರಿದಂತೆ ಎಲ್ಲಾ ಧರ್ಮ ಗ್ರಂಥಗಳು ಭಯೋತ್ಪಾದನೆಯನ್ನು ವಿರೋಧಿಸಿವೆ. ಈ ಧರ್ಮಗ್ರಂಥಗಳನ್ನು ಓದಿ ಅರ್ಥೈಸಿಕೊಂಡರೆ ಸಮಾಜದಲ್ಲಿ ಯಾವದೇ ಕೋಮುಗಲಭೆಗಳು, ಸಂಘರ್ಷಗಳು ನಡೆಯಲು ಸಾಧ್ಯವಿಲ್ಲ ಎಂದರು.

ಎಲ್ಲಾ ಧರ್ಮಗಳು ಶಾಂತಿಯನ್ನು ಬಯಸಿದರೆ, ರಾಜಕೀಯ ಪಕ್ಷಗಳು ಅದಕ್ಕೆ ಕಿಚ್ಚು ಹಚ್ಚಿಸುವ ಕಾರ್ಯ ನಡೆಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಧರ್ಮ ವೈಯಕ್ತಿಕ ವಿಚಾರ. ಇದನ್ನು ರಾಜಕೀಯಕ್ಕೆ ಬಳಸಬಾರದು. ಸರ್ವಧರ್ಮ ಸಮ್ಮೇಳನದಂತೆ ಸರ್ವ ಪಕ್ಷಗಳ ಸರಕಾರ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಲ್ ಹಾಜ್ ಅಬ್ದುಲ ಫೈಜಿ, ಇಸ್ಲಾಂ ಶಾಂತಿಯ, ಸೌಹಾರ್ದದ ಧರ್ಮವಾಗಿದೆ. ಎಲ್ಲಾ ಮಾನವರು ಒಂದೇ ಎಂಬ ಭಾವನೆ ಮುಸ್ಲಿಂ ಧರ್ಮದಲ್ಲಿದೆ. ಪರಸ್ಪರ ಗುರುತಿಸಲು ಮಾತ್ರ ಜಾತಿ, ಧರ್ಮ, ಪಂಗಡಗಳನ್ನು ಸೃಷ್ಟಿಸಲಾಗಿದೆ. ಎಲ್ಲರೂ ಸೌಹಾರ್ದಯುತವಾಗಿ ಬದುಕಬೇಕು ಎಂಬದು ಇಸ್ಲಾಂನ ಧ್ಯೇಯೋದ್ದೇಶವಾಗಿದೆ ಎಂದರು.

ಪತ್ರಕರ್ತ ರಾ. ಚಿಂತನ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಯುವ ಶಕ್ತಿಯ ಅಗತ್ಯವಿದೆ. ಯಾವದೇ ಧರ್ಮದ ಒಬ್ಬ ವ್ಯಕ್ತಿ ಮಾಡುವ ಅಪರಾಧ ಕೃತ್ಯ ಆತನಿಗೆ ಮಾತ್ರ ಸಂಬಂಧಿಸಿದ್ದು. ಅದಕ್ಕೆ ಜಾತಿ ಧರ್ಮಗಳನ್ನು ಸೇರಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವದು ಸರಿಯಿಲ್ಲ ಎಂದರು.

ಮಡಿಕೇರಿಯ ವೈದ್ಯ ಡಾ. ನವೀನ್ ಮಾತನಾಡಿ, ಸರ್ವಧರ್ಮ ಸಮ್ಮೇಳನಗಳು ಈಗಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಗೆ ಅಗತ್ಯವಾಗಿದೆ. ಮನುಷ್ಯ ಆಂತರಿಕ ಸಾಮರಸ್ಯ ಸಾಧಿಸಿದರೆ ಮಾತ್ರ ಸಮಾಜದಲ್ಲಿ ಸಾಮರಸ್ಯ ಮೂಡಲು ಸಾಧ್ಯ ಎಂದರು.

ಕೇರಳ ರಾಜ್ಯದ ಮಲಪುರಂನ ಆರ್ಜಿತ ಹಿಂದೂ ಸಮಾಜ ಪರಮಾಚಾರ್ಯ ಡಾ. ಆತ್ಮದಾಸ್ ಯಾಮಿ ಮಾತನಾಡಿ, ಇಡೀ ಜಗತ್ತು ಭಗವಂತನ ಸೃಷ್ಟಿಯಾಗಿದೆ. ಅದರೊಳಗೆ ಪ್ರಾಣಿ ಪಕ್ಷಿಗಳಂತೆ ಮನುಷ್ಯ ಜೀವಿಯು ಬದುಕುತಿದ್ದಾನೆ. ಈ ಜೀವಿತಾವಧಿಯಲ್ಲಿ ತಮ್ಮ ಸ್ವಾರ್ಥಕ್ಕಾಗಿ ಪರಸ್ಪರ ಕಚ್ಚಾಡುವದನ್ನು ಬಿಟ್ಟು ಪ್ರಾಣಿ ಪಕ್ಷಿಗಳಂತೆ ಯಾವದೇ ಆಸೆ, ವ್ಯಾಮೋಹಕ್ಕೆ ಬಲಿಯಾಗದೆ ನೆಮ್ಮದಿಯಿಂದ ಜೀವನ ಸಾಗಿಸಿದರೆ ಶಾಂತಿಯ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲ್ಕುನಾಡು ಮುಸ್ಲಿಂ ಜಮಾಅತ್ ಒಕ್ಕೂಟದ ಅಧ್ಯಕ್ಷ ಪಿ.ಎಂ. ಖಾಸಿಂ ವಹಿಸಿದ್ದರು.

ವೇದಿಕೆಯಲ್ಲಿ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್, ಗ್ರಾಮ ಪಂಚಾಯಿಸಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಎ. ಯಾಕೂಬ್, ನಾಪೆÇೀಕ್ಲು ಮುಹಿಯದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಪಿ.ಎಂ.ಸಲೀಂ ಹ್ಯಾರೀಸ್, ನಾಲ್ಕುನಾಡು ಮುಸ್ಲಿಂ ಜಮಾಅತ್ ಒಕ್ಕೂಟದ ಕಾರ್ಯಧ್ಯಕ್ಷ ಕೊಟ್ಟಮುಡಿ ಹೆಚ್.ಎ. ಹಂಸ, ಮಡಿಕೇರಿಯ ವಕೀಲ ಕೆ.ಎಂ.ಕುಂಞ ಅಬ್ದುಲ್ಲಾ, ಎಂ.ಎ.ಮನ್ಸೂರ್ ಅಲಿ ಮತ್ತಿತರರು ಇದ್ದರು.

ಈ ಸಂದರ್ಭ ರಾಜ್ಯ ಪ್ರಶಸ್ತಿ ವಿಜೇತ ಎಡಪಾಲದ ನಿವೃತ್ತ ಶಿಕ್ಷಕ ಉಮ್ಮರ್ ಮಾಸ್ಟರ್, ಹಿರಿಯ ಸಹಕಾರಿ ದುರೀಣ ನಾಪೆÇೀಕ್ಲುವಿನ ಬೊಪ್ಪೇರ ಸಿ.ಕಾವೇರಪ್ಪ, ರಾಷ್ಟ್ರಪತಿ ಪದಕ ವಿಜೇತ ನಿವೃತ್ತ ಪೆÇಲೀಸ್ ಅಧಿಕಾರಿ ಅಬ್ದುಲ್ಲ ಹಾಜಿ, ಪ್ರವಾಹ ಪೀಡಿತರಿಗೆ ಸ್ಥಳದಾನ ನೀಡಿದ ಕೊಂಡಂಗೇರಿಯ ಎಂ.ಬಿ.ಮಹಮೂದ್ ಅವರನ್ನು ಸನ್ಮಾನಿಸಲಾಯಿತು.

ಅಲ್ ಹಾಜ್ ಮಹಮೂದ್ ಮುಸ್ಲಿಯಾರ್ ಪ್ರಾರ್ಥಿಸಿ, ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರೆಹಮಾನ್ ಸ್ವಾಗತಿಸಿದರು.

ವಿಜೃಂಭಣೆಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮೊದಲು ಸಮೀಪದ ಹಳೇತಾಲೂಕಿನಿಂದ ನಾಪೆÇೀಕ್ಲು ಮಾರುಕಟ್ಟೆ ಆವರಣದವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ನಾಪೆÇೀಕ್ಲು, ಹಳೇ ತಾಲೂಕು, ಎಮ್ಮೆಮಾಡು, ಚೆರಿಯಪರಂಬು, ಕೊಳಕೇರಿ ಸೇರಿದಂತೆ ವಿವಿಧ ಮದರಸದ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ಏರ್ಪಡಿಸಲಾಗಿತ್ತು. -ಪಿ.ವಿ. ಪ್ರಭಾಕರ್