ಸಿದ್ದಾಪುರ, ಡಿ. 2: ಅರೆಕಾಡು ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಒತ್ತುವರಿ ಭೂಮಿ ತೆರವುಗೊಳಿಸಿದ ಜಾಗದಲ್ಲಿ ಇರುವ ಮರಗಳನ್ನು ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ನೇತೃತ್ವದಲ್ಲಿ ಪಟ್ಟಿಗಳನ್ನು ಮಾಡಲಾಯಿತು ಅರೆ ಕಾಡು ಗ್ರಾಮದಲ್ಲಿ ಸರಕಾರಿ ಭೂಮಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಿರುವ ಜಾಗದಲ್ಲಿದ್ದ ವಿವಿಧ ಜಾತಿಯ ಮರಗಳನ್ನು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಮಾರ್ಗದರ್ಶನದಲ್ಲಿ ಪಟ್ಟಿಗಳನ್ನು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಮುನ್ನೂರಕ್ಕೂ ಅಧಿಕ ಮರಗಳ ಪಟ್ಟಿಗಳನ್ನು ಮಾಡಲಾಗು ತ್ತಿದ್ದು, ಮರಗಳ ಪಟ್ಟಿಗಳನ್ನು ಮಾಡಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿಗಳು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಿ ದ್ದಾರೆ. ನಂತರ ಮೇಲಾಧಿಕಾರಿಗಳ ಅನುಮತಿ ಮೇರೆಗೆ ಜಾಗದಲ್ಲಿರುವ ಮರಗಳನ್ನು ಕಡಿಯುವ ಸಾಧ್ಯತೆ ಇದೆ. ಈಗಾಗಲೇ ಒತ್ತುವರಿ ಭೂಮಿಯಲ್ಲಿ ಇದ್ದ ಕಾಫಿ ಗಿಡಗಳ ಫಸಲುಗಳನ್ನು ಹಾಗೂ ಅಡಿಕೆ ಕರಿಮೆಣಸು ಫಸಲುಗಳನ್ನು ಪಂಚಾಯಿತಿಯ ಮೂಲಕ ಸ್ವಾಧೀನಕ್ಕೆ ಪಡೆದುಕೊಳ್ಳು ವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದ್ದಾರೆ ಅಲ್ಲದೆ ಒತ್ತುವರಿ ಭೂಮಿಯನ್ನು ಗ್ರಾಮ ಪಂಚಾಯಿತಿ ಸ್ವಾಧೀನಕ್ಕೆ ನೀಡಲಾಗಿದೆ ಕಾಫಿ ಫಸಲು ಕೊಯ್ಲು ಆದ ಬಳಿಕ ಅದೇ ಜಾಗದಲ್ಲಿ ಜೆಸಿಬಿ ಮೂಲಕ ಜಾಗವನ್ನು ಸಮತಟ್ಟು ಮಾಡಲಾಗುತ್ತದೆ ಈಗಾಗಲೇ ಅಡಿಕೆ ಮರಗಳನ್ನು ಕತ್ತರಿಸಲಾಗಿದ್ದು, ಅಡಿಕೆ ಫಸಲುಗಳನ್ನು ಹಾಗೂ ಕಾಫಿ ಫಸಲುಗಳನ್ನು ಪಂಚಾಯಿತಿ ತೆಗೆದುಕೊಂಡಿದೆ. ಸರಕಾರಿ ಭೂಮಿ ಒತ್ತುವರಿ ತೆರವು ಜಾಗಕ್ಕೆ ಮಡಿಕೇರಿಯಿಂದ ಪಟ್ಟಣ ಯೋಜನಾಧಿಕಾರಿ ಭೇಟಿ ನೀಡಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನಿವೇಶನಗಳನ್ನು ವಿಂಗಡಿಸುವ ಬಗ್ಗೆ ಪರಿಶೀಲನೆ ನಡೆಸಿದರು.
ಸ್ಥಳದಲ್ಲಿ ಎಡಿಎಲ್ಆರ್ ಷಂಶುದ್ದೀನ್, ಕುಶಾಲನಗರ ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಸಂತೋಷ್, ಪಿಡಿಒ ಅನಿಲ್ ಕುಮಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ತ್ವರಿತಗತಿಯಲ್ಲಿ ಕೆಲಸ ಕಾರ್ಯಗಳು ಸಾಗುತ್ತಿದೆ. - ವಾಸು