ಮಡಿಕೇರಿ, ನ. 30: ಕೊಡಗು ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿಗಳನ್ನು ದೂರದ ಜಿ.ಪಂ ಭವನಕ್ಕೆ ಸ್ಥಳಾಂತರಿಸಿದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ.ಎ. ರವಿಚಂಗಪ್ಪ, ಈ ಮೊದಲು ಕೋಟೆ ಆವರಣದ ಕಟ್ಟಡದಲ್ಲಿ ಕಚೇರಿ ಕಾರ್ಯ ನಿರ್ವಹಿಸುತ್ತಿತ್ತು. ಇತ್ತೀಚೆಗೆ ನಗರದ ಹಳೆಯ ಸೌದೆ ಡಿಪೋದ ಬಳಿ ಸ್ವಂತ ಕಟ್ಟಡಕ್ಕೆ ಪಂಚಾಯತ್ ರಾಜ್ ಇಂಜಿನಿ ಯರಿಂಗ್ ವಿಭಾಗದ ಕಚೇರಿಗಳು ಸ್ಥಳಾಂತರಗೊಂಡು ಕಾರ್ಯೋನ್ಮುಖ ವಾಗಿವೆ. ಇದು ಸಾರ್ವಜನಿಕರು ಹಾಗೂ ಗುತ್ತಿಗೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಇದೀಗ ಕಚೇರಿಗಳನ್ನು ಸುಮಾರು 7 ಕಿ.ಮೀ ದೂರವಿರುವ ಕೆ.ನಿಡುಗಣೆಯಲ್ಲಿರುವ ಜಿಲ್ಲಾ ಪಂಚಾಯತ್ ಭವನಕ್ಕೆ ಸ್ಥಳಾಂತರಿಸಲು ಕೆಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಯತ್ನಿಸು ತ್ತಿದ್ದಾರೆ ಎಂದು ಆರೋಪಿಸಿದರು. ಕಚೇರಿ ಸ್ಥಳಾಂತರಗೊಂಡರೆ ಗುತ್ತಿಗೆ ದಾರರು ಕಾಮಗಾರಿಗಳನ್ನು ಮುಗಿಸಿ ಬಿಲ್ಲನ್ನು ಸಲ್ಲಿಸುವ ಸಂದರ್ಭ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಹೋಗಿ ಬರಲು ಸುಮಾರು 14 ಕಿ.ಮೀ ಗಳನ್ನು ಕ್ರಮಿಸ ಬೇಕಾಗುತ್ತದೆ. ಕೆಲಸ, ಕಾರ್ಯಗಳು ವಿಳಂಬವಾಗುವದಲ್ಲದೆ ಕಾಮಗಾರಿ ನಿರ್ವಹಿಸಿದ ಒಂದು ಬಿಲ್ಗೆ ಹಲವಾರು ಕಚೇರಿಗೆ ಅಲೆದಾಡಿ ಅಂತಿಮ ಘಟ್ಟಕ್ಕೆ ಬರಲು ತಿಂಗಳುಗಳೇ ಬೇಕಾಗುತ್ತದೆ. ಗುತ್ತಿಗೆ ದಾರರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಚೇರಿಯನ್ನು ಸ್ಥಳಾಂತರಿಸಬಾರದು ಎಂದು ರವಿ ಚಂಗಪ್ಪ ಒತ್ತಾಯಿಸಿದರು. ಇದಕ್ಕೂ ಮೀರಿ ಸ್ಥಳಾಂತರ ಪ್ರಕ್ರಿಯೆಗೆ ಮುಂದಾದರೆ ಪ್ರತಿಭಟನೆ ನಡೆಸುವದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಕಾಮಗಾರಿಯ ಹಣವೇ ಬಂದಿಲ್ಲ: 2018-19ನೇ ಸಾಲಿನಲ್ಲಿ ತೀವ್ರವಾಗಿ ಭೂ ಕುಸಿತ ಉಂಟಾದ ಸಂದರ್ಭದಲ್ಲಿ ಕೆಲವು ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಆದರೆ ಇದುವರೆಗೂ ಕಚೇರಿ ಸ್ಥಳಾಂತರಗೊಂಡರೆ ಗುತ್ತಿಗೆ ದಾರರು ಕಾಮಗಾರಿಗಳನ್ನು ಮುಗಿಸಿ ಬಿಲ್ಲನ್ನು ಸಲ್ಲಿಸುವ ಸಂದರ್ಭ ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಹೋಗಿ ಬರಲು ಸುಮಾರು 14 ಕಿ.ಮೀ ಗಳನ್ನು ಕ್ರಮಿಸ ಬೇಕಾಗುತ್ತದೆ. ಕೆಲಸ, ಕಾರ್ಯಗಳು ವಿಳಂಬವಾಗುವದಲ್ಲದೆ ಕಾಮಗಾರಿ ನಿರ್ವಹಿಸಿದ ಒಂದು ಬಿಲ್ಗೆ ಹಲವಾರು ಕಚೇರಿಗೆ ಅಲೆದಾಡಿ ಅಂತಿಮ ಘಟ್ಟಕ್ಕೆ ಬರಲು ತಿಂಗಳುಗಳೇ ಬೇಕಾಗುತ್ತದೆ. ಗುತ್ತಿಗೆ ದಾರರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಕಚೇರಿಯನ್ನು ಸ್ಥಳಾಂತರಿಸಬಾರದು ಎಂದು ರವಿ ಚಂಗಪ್ಪ ಒತ್ತಾಯಿಸಿದರು. ಇದಕ್ಕೂ ಮೀರಿ ಸ್ಥಳಾಂತರ ಪ್ರಕ್ರಿಯೆಗೆ ಮುಂದಾದರೆ ಪ್ರತಿಭಟನೆ ನಡೆಸುವದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದರು.
ಕಾಮಗಾರಿಯ ಹಣವೇ ಬಂದಿಲ್ಲ: 2018-19ನೇ ಸಾಲಿನಲ್ಲಿ ತೀವ್ರವಾಗಿ ಭೂ ಕುಸಿತ ಉಂಟಾದ ಸಂದರ್ಭದಲ್ಲಿ ಕೆಲವು ತುರ್ತು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ, ಆದರೆ ಇದುವರೆಗೂ ಕೊಂಡು ಗುತ್ತಿಗೆ ನೀಡುತ್ತಿರುವದರಿಂದ ಸರ್ಕಾರದ ಹಣ ಪೋಲಾಗುತ್ತಿದೆ. ಇದೇ ರೀತಿಯಾಗಿ ಅಮ್ಮತ್ತಿಯಲ್ಲಿ ಇತ್ತೀಚೆಗಷ್ಟೇ ನಿರ್ಮಿಸಿದ ತಡೆಗೋಡೆ ಯೊಂದು ನಿಷ್ಪ್ರಯೋಜನವಾಗಿದೆ ಎಂದು ಆರೋಪಿಸಿದರು.
ಕರಿಕೆ ರಸ್ತೆ ಕಾಮಗಾರಿ ನಿರಾಸಕ್ತಿ : ಕರಿಕೆ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಗುತ್ತಿಗೆದಾರರು ಮುಂದೆ ಬಾರದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಸಂಘದ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ವಿ.ಆರ್. ರವಿಕುಮಾರ್, ಈ ರಸ್ತೆ ಕಾಮಗಾರಿಯಿಂದ ಗುತ್ತಿಗೆ ದಾರರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಅಭಿಪ್ರಾಯಪಟ್ಟರು. ಮರಳು, ಕಲ್ಲು ಇನ್ನಿತರ ಪರಿಕರಗಳನ್ನು ಅಷ್ಟು ದೂರದ ಪ್ರದೇಶಕ್ಕೆ ಕೊಂಡೊ ಯ್ಯಲು ಹೆಚ್ಚು ಖರ್ಚಾಗುತ್ತದೆ. ಆದರೆ ಇಲಾಖೆ ಅಲ್ಪಮೊತ್ತದ ಅನುದಾನದಲ್ಲಿ ಹೆಚ್ಚು ಕೆಲಸವನ್ನು ನಿರೀಕ್ಷಿಸುತ್ತದೆ, ಯೋಜನಾ ವೆಚ್ಚಕ್ಕೆ ತಕ್ಕಷ್ಟು ಹಣವನ್ನು ನೀಡದೆ ಇರುವದರಿಂದ ನಷ್ಟದ ಭೀತಿ ಎದುರಾಗಿದೆ. ಇದೇ ಕಾರಣಕ್ಕೆ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಗುತ್ತಿಗೆದಾರರು ಆಸಕ್ತಿ ತೋರುತ್ತಿಲ್ಲ ವೆಂದು ಬೇಸರ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷ ಬಿ.ಪಿ. ರಾಜೀವಲೋಚನ ಉಪಸ್ಥಿತರಿದ್ದರು.