ವೀರಾಜಪೇಟೆ, ನ. 30: ವೀರಾಜಪೇಟೆ ಪಟ್ಟಣ ಪಂಚಾಯಿತಿಯು ಸಾರ್ವಜನಿಕರ ಸೌಲಭ್ಯಕ್ಕಾಗಿ ಬಳಸುತ್ತಿರುವ ವಿದ್ಯುತ್ ಸಂಪರ್ಕದ ಸೈರನ್ಗಾಗಿ ವಿದ್ಯುತ್ ಬಿಲ್ ದುಬಾರಿಯಾಗಿದ್ದು ದೋಷಪೂರಿತದಿಂದ ಕೂಡಿದೆ ಎಂದು ಇಲ್ಲಿನ ಪಟ್ಟಣ ಪಂಚಾಯಿತಿಯ ಅಭಿಯಂತರ ಎನ್.ಪಿ.ಹೇಮ್ಕುಮಾರ್ ಅವರು ದೂರಿದ್ದಾರೆ.
ಕಳೆದ 2018ರ ಮಾರ್ಚ್ ತಿಂಗಳಲ್ಲಿ ಸೈರನ್ ಘಟಕದ ಮೀಟರ್ನ ಆರ್.ಆರ್.ನಂ 149ಕ್ಕೆ ಸೈರನ್ ಶಬ್ದಕ್ಕೆ ಮಾತ್ರ ತಿಂಗಳಿಗೆ ರೂ 723 ಬಿಲ್ ಬಂದಿದ್ದು ನಂತರ 2018ರ ಡಿಸೆಂಬರ್ ತಿಂಗಳಿಗೆ ಮಾತ್ರ ಇದೇ ಮೀಟರ್ಗೆ ರೂ 80,237 ದೋಷಪೂರಿತ ದುಬಾರಿ ಬಿಲ್ ಮಾಡಲಾಗಿದೆ. ಈ ದುಬಾರಿ ಬಿಲ್ನ ಕುರಿತು ಚೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದಾಗ ತಾಂತ್ರಿಕ ದೋಷದಿಂದ ಈ ದುಬಾರಿ ಬಿಲ್ ಆಗಿರಬಹುದು ಎಂದು ಮೀಟರ್ನ್ನು ತಪಾಸಣೆ ಮಾಡಿದಾಗಲೂ ಎಲ್ಲು ದೋಷ ಕಂಡುಬಂದಿಲ್ಲ. ದುಬಾರಿ ಬಿಲ್ನ್ನು ಪರಿಶೀಲಿಸುವಂತೆ ಕೋರಿದರೂ ಚೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳುತ್ತಿದ್ದಾರೆ. ದುಬಾರಿ ಬಿಲ್ನಲ್ಲಿ ಈ ಹಿಂದೆ ಅರ್ಧದಷ್ಟು ಬಿಲ್ ಪಾವತಿ ಮಾಡಲಾಗಿದೆ. ಅಕ್ಟೋಬರ್ ತಿಂಗಳಿನಲ್ಲೂ ಪುನ: ಈ ಬಿಲ್ನ್ನು ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮುಂದಾಗುತ್ತಿದ್ದಾರೆ ಇದಕ್ಕಾಗಿ ತಾ. 29 ರಂದು ಸೈರನ್ ಶಬ್ಧದ ಮೀಟರ್ನ ದೋಷ ಪೂರಿತ ಬಿಲ್ ರೂ. 57,000ವನ್ನು ಪಾವತಿಸಿ ವಿದ್ಯುತ್ ಸಂಪರ್ಕ ಪಡೆಯಬೇಕಾಯಿತು ಎಂದು ಹೇಮ್ಕುಮಾರ್ ತಿಳಿಸಿದ್ದಾರೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ನಿರಂತರವಾಗಿ ದೋಷಪೂರಿತ ಬಿಲ್ಗಳು ಬರುತ್ತಿದ್ದುದರ ಕುರಿತು ಪಂಚಾಯಿತಿ ಕಚೇರಿಯಿಂದ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪಂಚಾಯಿತಿಯಿಂದ ದುಬಾರಿ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಈ ರೀತಿ ಬಿಲ್ ಪಾವತಿಸಿದರೆ ಲೆಕ್ಕ ಪರಿಶೋಧಕರು ಆಕ್ಷೇಪಣೆ ಮಾಡುತ್ತಾರೆ. ಇದರಿಂದ ಪಟ್ಟಣ ಪಂಚಾಯಿತಿಯ ಆದಾಯ ವೆಚ್ಚದಲ್ಲಿ ಆಡಳಿತದ ವ್ಯವಸ್ಥೆಗೆ ತೊಂದರೆಯಾಗುತ್ತಿದೆ. ಪಟ್ಟಣದ ಬೀದಿ ದೀಪ, ಕುಡಿಯುವ ನೀರು ಪೊರೈಕೆ, ಪಟ್ಟಣ ಪಂಚಾಯಿತಿ ಕಚೇರಿಗೆ ವಿದ್ಯುತ್ ಸಂಪರ್ಕ ಸೇರಿದಂತೆ ಪ್ರತಿ ತಿಂಗಳು ರೂ ಒಂಭÀ್ತರಿಂದ ಹತ್ತು ಲಕ್ಷದವರೆಗೆ ಸರಾಸರಿ ಬಿಲ್ ಬರುತ್ತಿತ್ತು. ಈಗ ಇದಕ್ಕೂ ದುಬಾರಿಯ ದೋಷಪೂರಿತ ಬಿಲ್ ಮಾಡಿ ಈ ಬಿಲ್ ತಿಂಗಳಿಗೆ ರೂ. 65ಲಕ್ಷ ಬಿಲ್ ಮಾಡಲಾಗುತ್ತಿದೆ. ಈ ಬಿಲ್ನಂತೆ ಪಟ್ಟಣ ಪಂಚಾಯಿತಿ ರೂ 1ಕೋಟಿ 14ಲಕ್ಷ ಪಾವತಿ ಬಾಕಿ ಎಂದು ಚೆಸ್ಕಾಂ ಬಿಲ್ನಲ್ಲಿ ತೋರಿಸಲಾಗುತ್ತಿದೆ. ಈ ಬಿಲ್ನ್ನು ತಕ್ಷಣ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವ ಬೆದರಿಕೆ ಹಾಕಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮಟ್ಟಕ್ಕೆ ತಲುಪುತ್ತಿದ್ದಾರೆ ಎಂದು ಹೇಮ್ಕುಮಾರ್ ತಿಳಿಸಿದ್ದಾರೆ.