ಕಣಿವೆ, ನ. 29: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮ ಅರಣ್ಯ ಸಮಿತಿಯನ್ನು ನೂತನವಾಗಿ ರಚಿಸಲಾಯಿತು. ಗ್ರಾಮದ ಸರ್ಕಾರಿ ಶಾಲಾ ಸಭಾಂಗಣದಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಗ್ರಾಮಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹನ್ನೆರಡು ಮಂದಿಯ ಸಮಿತಿ ಮಾಡಲಾಯಿತು. ಗೋವಿಂದಪ್ಪ, ಎಂ.ಎಂ. ಪ್ರಕಾಶ್, ಜಯಶಂಕರ, ನಾಗರಾಜು, ದಿವಾಕರ, ಸ್ವಾಮಿ ನಾಯ್ಕ, ಚೆಲುವಮ್ಮ, ಈಶ್ವರಿ, ಮೀನಾ, ರತ್ನ, ಕಾಂಚನಾ ಹಾಗೂ ಮಂಜುಳಾ ಎಂಬವರನ್ನು ನೇಮಕ ಮಾಡಲಾಯಿತು. ಬಳಿಕ ಅರಣ್ಯ ಹಕ್ಕು ಸಮಿತಿ ನೂತನ ಅಧ್ಯಕ್ಷರನ್ನಾಗಿ ಗೋವಿಂದಪ್ಪ ಅವರನ್ನು ನೇಮಕ ಮಾಡಲಾಯಿತು. ಈ ಸಂದರ್ಭ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜಶೇಖರ್ ಗ್ರಾಮ ಅರಣ್ಯ ಸಮಿತಿಯ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.