ಮಡಿಕೇರಿ, ನ. 29: ಹಾಕಿ ಕರ್ನಾಟಕ ವತಿಯಿಂದ ಬೆಂಗಳೂರಿನ ಫೀ.ಮಾ. ಕಾರ್ಯಪ್ಪ ಹಾಕಿ ಕ್ರೀಡಾಂಗಣದಲ್ಲಿ ಜರುಗಿದ 17 ವರ್ಷದೊಳಗಿನ ಬಾಲಕಿಯರ ಸಬ್ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಪೊನ್ನಂಪೇಟೆ ಸಾಯಿ ಕ್ರೀಡಾ ವಸತಿ ನಿಲಯದ ಬಾಲಕಿಯರನ್ನು ಒಳಗೊಂಡಿದ್ದ ಕೊಡಗು ತಂಡ ಈ ಪಂದ್ಯಾವಳಿಯಲ್ಲಿ ಹಾಸನ ವಿರುದ್ಧ 8-1, ಧಾರವಾಡ ವಿರುದ್ಧ 5-0, ಶಿವಮೊಗ್ಗ ವಿರುದ್ಧ 14-0 ಹಾಗೂ ಕೂಡಿಗೆ ಕ್ರೀಡಾ ಶಾಲೆ ಎದುರು 1-0 ಗೋಲಿನ ಮೂಲಕ ಜಯ ಸಾಧಿಸುವದರೊಂದಿಗೆ ಚಾಂಪಿಯನ್ ಪಟ್ಟ ಗಳಿಸಿತು. ಈ ತಂಡವನ್ನು ಪ್ರತಿನಿಧಿಸಿದ್ದ ಬಹುತೇಕ ಆಟಗಾರರು ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.