ಸುಂಟಿಕೊಪ್ಪ, ನ. 29: ಶೌಚಾಲಯವಿದೆ ಆದರೆ ನೀರಿಲ್ಲ, ಸಭಾಂಗಣ ಮಳೆಗೆ ಆಹುತಿಯಾಗಿದೆ. ಶಾಲಾ ಆವರಣದಲ್ಲಿ ರಾತ್ರಿ ವೇಳೆ ಸಾರ್ವಜನಿಕರು ಬಂದು ಮದÀ್ಯಸೇವಿಸಿ, ಸಿಗರೇಟು ಸೇದಿ ತ್ಯಾಜ್ಯವನ್ನು ಎಸೆದು ಹೋಗುತ್ತಾರೆ. ಶಾಲೆಗೆ ಗೇಟು ನಿರ್ಮಿಸಿಕೊಡಿ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಏರ್ಪಡಿಸಲಾದ ಮಕ್ಕಳ ಗ್ರಾಮ ಸಭೆಯಲ್ಲಿ ಕೇಳಿ ಬಂದ ಮಾತಿನ ತುಣುಕುಗಳು....
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.
ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜು, ಸುಂಟಿಕೊಪ್ಪ ಸರಕಾರಿ ಪ್ರೌಢಶಾಲೆ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿ ಶಾಲೆಯಲ್ಲಿನ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದರು.
ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯವಿದೆ. ಆದರೆ ನೀರು ಸಿಗುತ್ತಿಲ್ಲ. ಶಾಲೆಯಲ್ಲಿ ನಡೆಸಲಾಗುವ ಪ್ರತಿಭಾ ಕಾರ್ಯಕ್ರಮಗಳಿಗೆ ಸಭಾಂಗಣ ಇಲ್ಲದ್ದಾಗಿದೆ. ನೂತನ ಸಭಾಂಗಣ ಅವಶ್ಯಕತೆ ಇದೆ, ನೀರಿನ ಡ್ರಮ್ ಪಾಚಿ ಕಟ್ಟಿದೆ. ಈ ನೀರು ಕುಡಿದರೆ ಆರೋಗ್ಯ ಹದಗೆಡಲಿದೆ, ಶಾಲೆಯ ಗೇಟು ಹಾಳಾಗಿದೆ. ಸಾರ್ವಜನಿಕರ ವಾಹನವನ್ನು ತಂದು ಶಾಲೆ ಆವರಣದೊಳಗೆ ನಿಲ್ಲಿಸುತ್ತಾರೆ. ಸಂಜೆ ವೇಳೆ ಸಾರ್ವಜನಿಕರು ಕೆಲವರು ಬಂದು ಶಾಲೆಯ ಕೊಠಡಿ ಬಳಿ ಮದÀ್ಯ ಸೇವಿಸಿ ಪ್ಯಾಕೆಟ್‍ಗಳನ್ನು ಬಿಸಾಡಿ ಸೀಗರೇಟು ಸೇದಿ ಹಿಂತೆರಳುತ್ತಾರೆ. ನಾವು ಬೆಳಿಗ್ಗೆ ಬಂದು ಶುಚಿಗೊಳಿಸಬೇಕು ಇದಕ್ಕೆ ಕಡಿವಾಣ ಹಾಕಿ ಎಂದು ಪ್ರಶ್ನೆಗಳನ್ನು ಮುಂದಿಟ್ಟರು. ಗದ್ದೆಹಳ್ಳ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸುತ್ತ ತಡೆಗೋಡೆ ನಿರ್ಮಾಣಗೊಳ್ಳ ಬೇಕಾಗಿದೆ ಎಂದು ಬೇಡಿಕೆಯನ್ನು ಮುಂದಿಟ್ಟರು. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಶಾಲೆಯ ಮಕ್ಕಳು ನೀರನ್ನು ವೃಥಾವ್ಯ ಮಾಡುತ್ತಿರುವದು ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟಬೇಕು ಎಂದು ಅಧ್ಯಕ್ಷರು ಹೇಳಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಗ್ರಾ.ಪಂ. ಸದಸ್ಯರುಗಳಾದ ಕೆ.ಇ. ಕರೀಂ, ಎ. ಶ್ರೀಧರ್ ಕುಮಾರ್, ರಹೆನಾ ಫೈರೋಜ್, ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ, ಕೊಡಗು ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಗೀತಾ, ಗದ್ದೆಹಳ್ಳ ಶಾಲೆಯ ಮುಖ್ಯೋಪಾಧ್ಯಾಯಿನಿ ಹೇಮಾವತಿ, ವಿವಿಧ ಶಾಲೆಗಳಿಂದ ಆಗಮಿಸಿದ ಸಹ ಶಿಕ್ಷಕರು ಇದ್ದರು.