ಚೆಟ್ಟಳ್ಳಿ, ನ. 28: ಕೊಡಗು ಜಿಲ್ಲೆಯಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಸಮನ್ವಯ ವಿದ್ಯಾಕೇಂದ್ರ ಅನ್ವಾರುಲ್ ಹುದಾದಲ್ಲಿ ವೀರಾಜಪೇಟೆಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ) ಮರ 1494ನೇ ಜನ್ಮದಿನಾಚರಣೆಯ ಅಂಗವಾಗಿ ಹುಬ್ಬುನ್ನಬಿ ಕಾನ್ಫರೆನ್ಸ್ ನಾಲ್ಕು ದಿನಗಳ ಕಾಲ ನಡೆಯಿತು.
ಹುಬ್ಬುನ್ನಬಿ ಕಾನ್ಫರೆನ್ಸ್ ಪ್ರಯುಕ್ತ ಅನ್ವಾರುಲ್ ಹುದಾ ವಿದ್ಯಾರ್ಥಿಗಳಿಗೆ ಹೈಮನ ಕಲಾ ಉತ್ಸವದಲ್ಲಿ ಟೀಮ್ ಗ್ರೀನ್ ವ್ಯಾಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ದ್ವಿತೀಯ ಸ್ಥಾನವನ್ನು ಬ್ಲೂಸ್ಟಾರ್ ಹಾಗೂ ತೃತೀಯ ಸ್ಥಾನವನ್ನು ವೈಟ್ ಹಾರ್ಸ್ ಪಡೆದುಕೊಂಡಿತು.
ಅನ್ವಾರುಲ್ ಹುದಾ ವಿದ್ಯಾರ್ಥಿಗಳಿಗೆ ಐದಕ್ಕೂ ಹೆಚ್ಚು ವಿಭಾಗಗಳಲ್ಲಿ 150ಕ್ಕೂ ಹೆಚ್ಚು, ವಿವಿಧ ಸ್ಪರ್ಧೆಗಳು ನಡೆಯಿತು. ಸೀನಿಯರ್ ವಿಭಾಗದಲ್ಲಿ ಪಿ.ಎ. ಶರೀಫ್ ಹೊಸತೋಟ 55 ಅಂಕಗಳಿಸಿ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು.
ಜೂನಿಯರ್ ವಿಭಾಗದಲ್ಲಿ ಅನೀಸ್ ಕಡಂಗ 56 ಅಂಕಗಳಿಸಿ ಜೂನಿಯರ್ ವಿಭಾಗದ ಚಾಂಪಿಯನ್ ಪ್ರಶಸ್ತಿ ಪಡೆದರು. ಸಬ್ ಜೂನಿಯರ್ ವಿಭಾಗದಲ್ಲಿ ಮೊಹಮ್ಮದ್ ಕೊಳಕೇರಿ 59 ಅಂಕ, ಸಲ್ಮಾನ್ ಫಾರಿಸ್ ಹೊಸತೋಟ 56 ಅಂಕ ಹಾಗೂ ಇರ್ಫಾನ್ ಎಮ್ಮೆಮಾಡು 50 ಅಂಕಗಳೊಂದಿಗೆ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು.
ಮುಖ್ಯ ತೀರ್ಪುಗಾರರಾಗಿ ಶಫೀಖ್ ಸಖಾಫಿ ಕಣ್ಣೂರು, ಶಾಫಿ ಅನ್ವಾರಿ ಅಸ್ಸಖಾಫಿ ಕೊಡಗರಹಳ್ಳಿ ಮತ್ತು ತೀರ್ಪುಗಾರರಾಗಿ ಅಬ್ದುರ್ರಶೀದ್ ಸಅದಿ ಅಯ್ಯಂಗೇರಿ, ಇಸ್ಮಾಯಿಲ್ ಸಖಾಫಿ ಇರಿಟ್ಟಿ, ಅಬ್ದುರ್ರಹ್ಮಾನ್ ಅಹ್ಸನಿ ಕೊಳಕೇರಿ, ಇಬ್ರಾಹಿಂ ಮಾಸ್ಟರ್ ಕೊಂಡಂಗೇರಿ, ಝೈನುದ್ದೀನ್ ಅಝ್ಹರಿ ಮಲಪ್ಪುರಂ, ಹಾಫಿಝ್ ಮುಬಶ್ಶಿರ್, ಅಹ್ಸನಿ ಕೊಳಕೇರಿ, ಹಂಶಾದ್ ಅನ್ವಾರಿ ಕಡಂಗ, ಸಕೀರ್ ಮಾಸ್ಟರ್ ಪೊನ್ನತ್ಮೊಟ್ಟೆ, ಹಾಗೂ ಖಮರುದ್ದೀನ್ಸ್ ಸಖಾಫಿ ಕೊಡಗರಹಳ್ಳಿ ಕಾರ್ಯನಿರ್ವಹಿಸಿದರು.
- ಕೆ.ಎಂ. ಇಸ್ಮಾಯಿಲ್ ಕಂಡಕರೆ