ಮಡಿಕೇರಿ, ನ. 28: ಕೂಡಿಗೆಯ ಸೈನಿಕ ಶಾಲೆಯಲ್ಲಿ ಇದೀಗ ಹೊಸದಾಗಿ ಬಾಲಕಿಯರಿಗೆ ಪ್ರವೇಶಾವಕಾಶÀ ಒದಗಿ ಬಂದಿದೆ. ಕೇಂದ್ರದ ರಕ್ಷಣಾ ಸಚಿವ ರಾಜನಾಥ್‍ಸಿಂಗ್ ಅವರು ಇತ್ತೀಚೆಗೆ ಆದೇಶವೊಂದನ್ನು ಹೊರಡಿಸಿ ದೇಶದ 5 ಸೈನಿಕ ಶಾಲೆಗಳಲ್ಲಿ ಈ ವರ್ಷದಿಂದ ಬಾಲಕಿಯರಿಗೆ ಪ್ರವೇಶಾವಕಾಶ ಕಲ್ಪಿಸಿದ್ದಾರೆ. ಆದರೆ ಪ್ರವೇಶದÀ ಒಟ್ಟು ಸಂಖ್ಯೆಯ ಶೇ 10 ರಷ್ಟು ಸಂಖ್ಯೆಯಲ್ಲಿ ಮಾತ್ರ ಬಾಲಕಿಯರಿಗೆ ಅವಕಾಶವಿದೆ. ಆದರೂ, ಇದೊಂದು ಐತಿಹಾಸಿಕ ನಿರ್ಧಾರವೆನ್ನುವ ಬಗ್ಗೆ ಅಭಿಪ್ರಾಯ ಮೂಡಿದೆ.

ಕೂಡಿಗೆ ಸೈನಿಕ ಶಾಲೆಯಲ್ಲಿ 85 ಬಾಲಕರನ್ನು 6ನೇ ತರಗತಿಗೆ ಸೇರಿಸಿಕೊಳ್ಳಲು ಅವಕಾಶವಿದ್ದರೆ, 9 ಬಾಲಕಿಯರನ್ನು ಸೇರಿಸಿಕೊಳ್ಳಲು ಈ ವರ್ಷ ಸಾಧ್ಯವಿದೆ. ಪ್ರವೇಶಾವಕಾಶಕ್ಕೆ ಅರ್ಜಿಯನ್ನು ಮಕ್ಕಳು ‘ಆನ್ ಲೈನ್’ ಮೂಲಕ ಸಲ್ಲಿಸಬಹುದಾಗಿದೆ. ನ. 26 ರಿಂದಲೇ ಅರ್ಜಿಗೆ ಅವಕಾಶವಿದ್ದು ಡಿಸೆಂಬರ್ 6ರ ವರೆಗೂ ಅವಧಿಯಿದೆ. 6ನೇ ತರಗತಿಗೆ ಪ್ರವೇಶಾವಕಾಶಕ್ಕಾಗಿ ಬಾಲಕಿಯರಿಗೆ ವಯೋ ಪರಿಮಿತಿಯೆಂದರೆ 2008ರ ಏಪ್ರಿಲ್ 1 ರಿಂದ 2010ರ ಮಾರ್ಚ್ 31ರ ಒಳಗೆ ಜನಿಸಿರಬೇಕು. ಇವರಿಗೆ ಪ್ರವೇಶÀ ಪರೀಕ್ಷೆಯು 2020ರ ಜನವರಿ 5 ರಂದು ನಡೆಯತ್ತದೆ. ಎರಡು ಪರೀಕ್ಷಾ ಕೇಂದ್ರಗಳೆಂದರೆ, ಬೈಲುಕುಪ್ಪೆ ಹಾಗೂ ಮಂಗಳೂರು.