ಗೋಣಿಕೊಪ್ಪ ವರದಿ, ನ. 27: ಹಾತೂರು ಒಕ್ಕಲಿಗರ ಸಂಘದ 4 ನೇ ವರ್ಷದ ಕ್ರೀಡಾಕೂಟವು ಹಾತೂರು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾಂಗಣದಲ್ಲಿ ನಡೆಯಿತು. ಮಾಜಿ ಸೈನಿಕ ವಿ.ಜಿ. ಪುಟ್ಟಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕ್ರೀಡೆ ಎಲ್ಲಾ ವಯಸ್ಕರನ್ನು ಸೆಳೆಯುವಂತಹ ಶಕ್ತಿ ಹೊಂದಿರುವದ ರಿಂದ ನಿರಂತರ ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಪುರುಷರು, ಮಹಿಳೆಯರು ಸೇರಿದಂತೆ ಮಕ್ಕಳಿಗೆ ಪ್ರಾಥಮಿಕ, ಪ್ರೌಢ ಹಾಗೂ ಪೂರ್ವ ಪ್ರಾಥಮಿಕ ವಿಭಾಗಗಳಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ವಾಲಗ ನೃತ್ಯದಲ್ಲಿ ವಿ.ಎಸ್.ಲಿಖಿತ್, ಡಿ.ವಿ. ಪ್ರಶಾಂತ್, ವಿ.ಕೆ. ದೀಪಿಕಾ, ವಿ.ಎಂ. ಶಿಲ್ಪ ಹಾಗೂ ವಿ.ಆರ್. ಕೃಷ್ಣ ಬಹುಮಾನ ಪಡೆದರು.
ಹಾತೂರು ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್.ಜಿ. ಅನಿಲ್ ಕುಮಾರ್, ಕಾರ್ಯದರ್ಶಿ ವಿ.ಜಿ. ಮಧುಸೂದನ್, ಉಪಾಧ್ಯಕ್ಷ ವಿ.ಬಿ.ಹೀರೇಶ್, ಖಜಾಂಚಿ ವಿ.ಎಸ್.ಪ್ರಕಾಶ್ ನಿರ್ದೇಶಕರುಗಳಾದ ಡಿ.ಎಸ್. ಪ್ರಸನ್ನ, ವಿ.ಎನ್ ಮಹೇಶ್, ಭವಿನ್, ಅಭಿಷೇಕ್ ಬಹುಮಾನ ವಿತರಣೆ ಮಾಡಿದರು.
ತೀರ್ಪುಗಾರರಾಗಿ ಅನಿಲ್ ಕುಮಾರ್, ವಿ.ಡಿ ಕಿಲನ್ ಕಾರ್ಯನಿರ್ವಹಿಸಿದರು. ಜಿ.ಎನ್. ಅಶ್ವಿನಿ ಅನಿಲ್ ಹಾಗೂ ವಿ.ಎಂ. ಶಿಲ್ಪ ಪ್ರಾರ್ಥಿಸಿದರು. ವಿ.ಎನ್. ಮಹೇಶ್ ಸ್ವಾಗತಿಸಿದರು. ಮಧುಸೂದನ್ ಕಾರ್ಯಕ್ರಮ ನಿರೂಪಿಸಿದರು.