ಮಡಿಕೇರಿ, ನ. 28: ನಗರದ ಟ್ರೈಕಲರ್ ಅಕಾಡೆಮಿ ಸಂಸ್ಥೆ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಎರಡು ದಿನಗಳ ಉಚಿತ ಕಾರ್ಯಾಗಾರ ನಡೆಯಿತು.

ನಗರದ ರೇಸ್‍ಕೋರ್ಸ್ ರಸ್ತೆಯ ಟ್ರೈಕಲರ್ ಸಂಸ್ಥೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾನಸಿಕ ಸಾಮಥ್ರ್ಯ ಮತ್ತು ಏಕಾಗ್ರತೆಯ ಸಮಸ್ಯೆಗಳಿಗೆ ಸರಳ ರೀತಿಯ ಪರಿಹಾರವನ್ನು ಹೇಳಿಕೊಡಲಾಯಿತು. ಅಲ್ಲದೆ ಸಂಪನ್ಮೂಲ ವ್ಯಕ್ತಿಗಳು ಪರೀಕ್ಷೆ ತಯಾರಿಯ ಬಗ್ಗೆ ಮಾರ್ಗದರ್ಶನ ನೀಡಿ ಸ್ಫೂರ್ತಿದಾಯಕ ನುಡಿಗಳನ್ನಾಡಿದರು.

ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಎಸಿಪಿ ದೇವರಾಜ್ ಉಪನ್ಯಾಸ ನೀಡಿ ಶೈಕ್ಷಣಿಕ ಸಾಧನೆಯ ಸುಗಮ ಹಾದಿಯ ಕುರಿತು ವಿವರಿಸಿದರು. ಸುಮಾರು 60 ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದರು. ಟ್ರೈ ಕಲರ್ ಅಕಾಡೆಮಿ ನಿರ್ದೇಶಕಿ ಮೋಕ್ಷಿತ ಪಟೇಲ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.