ನಾಪೆÇೀಕ್ಲು, ನ. 28: ಇತ್ತೀಚೆಗೆ ರಾಜ್ಯದಲ್ಲಿ ನಡೆದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಿಂದ ಜಿಲ್ಲೆಯ ಬಹಳಷ್ಟು ಸರಕಾರಿ ಪ್ರಾಥಮಿಕ ಮತ್ತು ಪೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗಿದ್ದು, ವಿದ್ಯಾರ್ಥಿಗಳು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.

ಶಿಕ್ಷಣ ಇಲಾಖೆಯ ಈ ಕ್ರಮ ಸಮಸ್ಯೆಯನ್ನು ಉಂಟುಮಾಡಿದಂತೆ ಗೋಚರಿಸುತ್ತಿದೆ. ಶಿಕ್ಷಣ ಇಲಾಖಾಧಿಕಾರಿಗಳು ಶಿಕ್ಷಕರ ಕೊರತೆಯಿರುವ ಶಾಲೆಗೆ ಬೇರೆ ಶಾಲೆÉಯಿಂದ ಹೆಚ್ಚುವರಿಯಾಗಿ ಶಿಕ್ಷಕರನ್ನು ನೇಮಕಗೊಳಿಸುತ್ತಿದ್ದರೂ, ಇದೊಂದು ತೇಪೆ ಹಚ್ಚುವ ಕಾರ್ಯದಂತಾಗಿದ್ದು, ಒಂದೆಡೆ ಎಳೆದರೆ ಮತ್ತೊಂದು ಭಾಗದಲ್ಲಿ ಹರಿಯುವ ಪರಿಸ್ಥಿತಿ ಕಂಡುಬರುತ್ತಿದೆ.

ಹೆಚ್ಚಿನ ಶಿಕ್ಷಕರ ಕೊರತೆ ಎದುರಾಗಿರುವ ಶಾಲೆಗಳಿಗೆ ಅನುದಾನಿತ ಶಾಲೆಗಳ ಶಿಕ್ಷಕರನ್ನು ವಾರದಲ್ಲಿ ಮೂರು ದಿನ ನಿಯೋಜಿಸಲಾಗಿದೆ. ಇದರಿಂದ ಈ ಎರಡೂ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆ ಉಂಟಾದಂತಾಗಿದೆ. ಕೆಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿರುವ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿದೆ. ವಾರದ ಆರು ದಿನಗಳು ಪಾಠ ಮಾಡಿದರೂ ಮಕ್ಕಳು ಕಲಿಯಲು ಕಷ್ಟಪಡುತ್ತಾರೆ. ವಾರದಲ್ಲಿ ಮೂರು ದಿನ ಮಾತ್ರ ಪಾಠ ಮಾಡಿದರೆ, ಅವರು ಪಾಸಾಗಲು ಸಾಧ್ಯವೇ ಎಂಬದು ಪೆÇೀಷಕರಲ್ಲಿ ಉದ್ಭವಿಸುವ ಪ್ರಶ್ನೆಯಾಗಿದೆ. ಮೊದಲೇ ಸರಕಾರಿ ಶಾಲೆಗಳಲ್ಲಿ ಫಲಿತಾಂಶ ಅಷ್ಟಕಷ್ಟೇ ಇದೆ. ಈಗ ಶಿಕ್ಷಕರ ಕೊರತೆ ಎದುರಾಗಿದೆ. ಮುಂದಿನ ವರ್ಷದ ಫಲಿತಾಂಶ ಏನಾಗುವದೋ ಎನ್ನುತ್ತಾರೆ ಶಿಕ್ಷಣ ತಜ್ಞರು.

ಜಿಲ್ಲೆಯವರನ್ನೇ ನೇಮಕಗೊಳಿಸಬೇಕು: ಶಿಕ್ಷಣ ಇಲಾಖೆ, ಪೆÇಲೀಸ್ ಇಲಾಖೆ, ಕಂದಾಯ ಇಲಾಖೆ, ವಿದ್ಯುತ್ ಇಲಾಖೆ ಸೇರಿದಂತೆ ಬಹುತೇಕ ಎಲ್ಲಾ ಇಲಾಖೆಗಳಲ್ಲಿಯೂ ಬೇರೆ ಬೇರೆ ಜಿಲ್ಲೆಯ ಸರಕಾರಿ ನೌಕರರನ್ನು ಜಿಲ್ಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕೆಲಸದ ಅನಿವಾರ್ಯತೆಯಿಂದ ದೂರದ ಊರಾದರೂ ಚಿಂತೆಯಿಲ್ಲ ಎಂದು ಮನೆ, ಮಠ, ತಂದೆ, ತಾಯಿ, ಕುಟುಂಬದಿಂದ ದೂರವಿದ್ದು ಒಬ್ಬಂಟಿ ಜೀವನ ಸಾಗಿಸುವ ಇವರು ಮೂರು ವರ್ಷ ಯಾವಾಗ ಆಗುವದೋ, ಒಮ್ಮೆ ಊರಿಗೆ ವರ್ಗಾವಣೆಗೊಂಡರೆ ಸಾಕು ಎಂದು ಆತುರದಿಂದ ಕಾಯುತ್ತಿರುತ್ತಾರೆ. ಇದಕ್ಕೆ ಅವರೂ ಕಾರಣರಲ್ಲ. ಅದರ ಬದಲಿಗೆ ಆಯಾಯ ಜಿಲ್ಲೆಯ ನೌಕರರನ್ನು ಆ ಜಿಲ್ಲೆಗಳಿಗೆ ಕರ್ತವ್ಯಕ್ಕೆ ನೇಮಿಸಿದ್ದಲ್ಲಿ ಇತಂಹ ಸಮಸ್ಯೆಗಳು ಉದ್ಭವಿಸದಿರಬಹುದು ಎನ್ನುವದು ಪ್ರಜ್ಞಾವಂತರ ಅಭಿಪ್ರಾಯ.

ಆದುದರಿಂದ ಇಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರಕಾರ, ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎನ್ನುವದು ಸಾರ್ವಜನಿಕರ ಅಭಿಲಾಷೆಯಾಗಿದೆ. -ಪಿ.ವಿ. ಪ್ರಭಾಕರ್