ಗುಡ್ಡೆಹೊಸೂರು, ನ. 27: ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಶ್ರೀ ಜೋಡಿ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಕೊನೆಯ ಪೂಜೆಯ ಅಂಗವಾಗಿ ವಿಶೇಷಪೂಜೆ ನಡೆಸಲಾಯಿತು. ಕಾರ್ತಿಕ ಮಾಸದ ಒಂದು ತಿಂಗಳು ದೇವಸ್ಥಾನದಲ್ಲಿ ರಾತ್ರಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್.ಪಿ. ಕುಶಾಲಪ್ಪ, ಉಪಾಧ್ಯಕ್ಷ ಆನೇರ ರಮೇಶ್, ಕಾರ್ಯದರ್ಶಿ ಕೆ.ಟಿ. ಧನಂಜಯ ಮತ್ತು ಸಮಿತಿಯ ಸರ್ವಸದಸ್ಯರು ಹಾಜರಿದ್ದರು.