ಮಡಿಕೇರಿ, ನ. 28: ಜಿಲ್ಲಾ ಮಟ್ಟದ ಗೃಹ ರಕ್ಷಕರ ವಾರ್ಷಿಕ ವೃತ್ತಿಪರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ನಡೆಯಿತು.

ಜಿಲ್ಲಾ ಗೃಹರಕ್ಷಕ ದಳ ಹಾಗೂ ಪೊಲೀಸ್ ಉಪ ಅಧೀಕ್ಷಕರಾದ ಬಿ.ಪಿ. ದಿನೇಶ್‍ಕುಮಾರ್ ಅವರು ಮಾತನಾಡಿ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಲಿದೆ ಎಂದರು.

ಪೊಲೀಸ್ ಉಪ ಅಧೀಕ್ಷಕ ಪಿ.ಕೆ. ಮುರುಳೀಧರ ಮಾತನಾಡಿ, ಯೋಚನಾ ಶಕ್ತಿ, ಏಕಾಗ್ರತೆ, ಸಮಯಸ್ಪೂರ್ತಿ, ಎದೆಗುಂದದೆ ಪ್ರತಿಕೂಲ ಪರಿಸ್ಥಿತಿ ಎದುರಿಸುವ ಮನೋಭಾವ ಒಬ್ಬ ಒಳ್ಳೆಯ ಆಟಗಾರನಿಗೆ ಇರುತ್ತದೆ ಎಂದು ಹೇಳಿದರು.

ಪೋಲಿಸ್ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸದಾಶಿವ ಎಂ.ಕೆ, ಜಿಲ್ಲಾ ಸಹಾಯಕ ಆಡಳಿತಾಧಿಕಾರಿ ನಂಜಪ್ಪ, ಪೊಲೀಸ್ ಸಿಬ್ಬಂದಿಗಳು ಮತ್ತು ಗೃಹ ರಕ್ಷಕ ಸಿಬ್ಬಂದಿಗಳು ಇತರರು ಪಾಲ್ಗೋಂಡಿದ್ದರು.