ಕುಶಾಲನಗರ, ನ. 26: ಎಸ್‍ಎನ್‍ಡಿಪಿ ಕುಶಾಲನಗರ ಶಾಖೆಯ ಅಧ್ಯಕ್ಷರಾಗಿ ಕೆ.ಟಿ.ಗಣೇಶ್, ಉಪಾಧ್ಯಕ್ಷರಾಗಿ ಎಂ.ಆರ್. ಬಾಲಕೃಷ್ಣ ಅವರುಗಳು ಆಯ್ಕೆಯಾಗಿದ್ದಾರೆ.

ಎಸ್‍ಎನ್‍ಡಿಪಿ ಕೊಡಗು ಯೂನಿಯನ್ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅಂಗೀಕರಿಸುವದರೊಂದಿಗೆ ಕುಶಾಲನಗರದಲ್ಲಿ ನೂತನ ಕಚೇರಿಯಲ್ಲಿ ಅಧಿಕೃತವಾಗಿ ಶಾಖೆಗೆ ಚಾಲನೆ ನೀಡಲಾಯಿತು. ಎಸ್‍ಎನ್‍ಡಿಪಿ ಕುಶಾಲನಗರ ಶಾಖೆಯನ್ನು ಯೂನಿಯನ್ ಸಂಯೋಜಕ ಕೆ.ಎನ್. ವಾಸು ಉದ್ಘಾಟಿಸಿದರು. ನಂತರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಸದಸ್ಯತ್ವ ಸೇರಿದಂತೆ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಯೂನಿಯನ್ ಸಹ ಸಂಯೋಜಕ ಕೆ.ವಿ. ಕಿಶೋರ್, ಸದಸ್ಯ ಟಿ.ವಿ. ಕಿಶೋರ್, ನೂತನ ಶಾಖೆಯ ಕಾರ್ಯದರ್ಶಿ ಕೆ.ಆರ್. ರಾಜೇಶ್, ಸದಸ್ಯರಾದ ಎಂ.ಎನ್. ಪ್ರಸನ್ನಕುಮಾರ್, ಟಿ.ಎಸ್. ಪ್ರಸಾದ್, ಕೆ. ಜಯ, ಟಿ.ಎಸ್. ಉದಯಕುಮಾರ್, ವಿ.ಕೆ. ದಿವಾಕರ, ಕೆ.ದಾಸ್, ಅನೀಶ್, ಹರಿದಾಸ್, ವಿನೋದ್ ಇದ್ದರು.