ಚೆಟ್ಟಳ್ಳಿ, ನ. 26: ಚೆಟ್ಟಳ್ಳಿಯಿಂದ ಮಡಿಕೇರಿ ಕಡೆಗೆ ಸಾಗುವ ರಸ್ತೆಯು ತುಂಬಾ ಕಡಿದಾಗಿ ತಿರುವುಗಳಿಂದ ಕೂಡಿದ್ದು, ಅಲ್ಲಲ್ಲಿ ರಸ್ತೆಯು ಗುಂಡಿ ಬಿದ್ದು ಹಾಳಾಗಿದೆ. ಆದುದರಿಂದ ರಸ್ತೆಯಲ್ಲಿ ಸಾಗುವ ವಾಹನಗಳು ಮೆಲ್ಲೆ ಸಾಗಬೇಕಾಗಿರುತ್ತದೆ. ತಪ್ಪಿದಲ್ಲಿ ರಸ್ತೆಯ ಬದಿಯಲ್ಲಿರುವ ಗುಂಡಿಗೆ ಬೀಳುವ ಸಾಧ್ಯತೆ ಹೆಚ್ಚು. ಆದರೆ ಅದನ್ನು ಹೇಗಾದರೂ ನಿಭಾಯಿಸಿಕೊಂಡು ಸಾಗುವ ಎಂದರೆ, ರಸ್ತೆಯ ಇನ್ನೊಂದು ಬರೆಯ ಮೇಲೆ ಹಲವಾರು ಒಣಗಿದ ಮರ ಪ್ರಯಾಣಿಕರ ತಲೆಯ ಮೇಲೆ ಬೀಳಲು ಕಾತರಿಸುತ್ತಿವೆ. ಈ ರಸ್ತೆಯಲ್ಲಿ ದಿನ ಶಾಲಾ ವಾಹನಗಳು, ಬಸ್‍ಗಳು, ಕಾರುಗಳು, ನೂರಾರು ದ್ವಿಚಕ್ರ ವಾಹನಗಳು ಓಡಾಡುತ್ತವೆ. ಆದುದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಇಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

- ಪುತ್ತರಿರ ಪಪ್ಪು ತಿಮ್ಮಯ್ಯ, ಚೆಟ್ಟಳ್ಳಿ