ಸಂಪಾಜೆ, ನ. 25: 2019-20ನೇ ಸಾಲಿನ ತಾ.ಪಂ. ಯೋಜನೆಯಡಿ ತೋಟಗಾರಿಕೆ ಉತ್ಪನ್ನಗಳ (ಹಣ್ಣು ಮತ್ತು ತರಕಾರಿ) ಸಂಸ್ಕರಣೆ ಮತ್ತು ಅಣಬೆ ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮ ಪಯಶ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನ ಸಂಪಾಜೆಯಲ್ಲಿ ನಡೆಯಿತು.
ಕಾರ್ಯಕ್ರಮ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಅಧ್ಯಕ್ಷತೆಯಲ್ಲಿ ಕೃಷಿಕ ಉಲ್ಲಾಸ ಕೇನಾಜೆ ಅವರ ಉದ್ಘಾಟನೆಯೊಂದಿಗೆ ನಡೆಯಿತು. ಪಯಶ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ್, ಉಪಾಧ್ಯಕ್ಷ ಸುಂದರ ಬಿಸಿಲುಮನೆ, ತಾಂತ್ರಿಕ ಮಾಹಿತಿಯನ್ನು ಸ್ವಾತಿ ಮುದ್ದಯ್ಯ ನೀಡಿದರು. ವಿಷಯ ತಜ್ಞ ರಮೇಶ್ ಇಪ್ಪಿಕೊಪ್ಪ ಹಾಜರಿದ್ದರು.
 
						