ವೀರಾಜಪೇಟೆ, ನ. 25: ವೀರಾಜಪೇಟೆ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತರಿಂದ ನಡೆದ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರು ತಾಲೂಕು ಕಚೇರಿ ಸಿಬ್ಬಂದಿಗಳ ವಿರುದ್ಧ ದೂರು ನೀಡಿದರು.

ತಾಲೂಕಿನಾದ್ಯಂತ ಬರುವ ಜಮ್ಮ ಹಿಡುವಳಿದಾರರ, ರೈತರ ಹಾಗೂ ಸಾರ್ವಜನಿಕರ ಅರ್ಜಿಗಳು ವಿಲೇವಾರಿಯಾಗದೆ ವಿಳಂಬವಾಗು ತ್ತಿವೆ. ಕಚೇರಿಗೆ ಸಂಬಂಧಿಸಿದ ಸಿಬ್ಬಂದಿಗಳ ಬಗ್ಗೆ ಕ್ರಮ ಜರುಗಿಸು ವಂತಾಗಬೇಕೆಂದು ಇದರ ಬಗ್ಗೆ ಕ್ರಮ ಜರುಗಿಸುವಂತೆ ಕೆಲವರು ಲೋಕಾ ಯುಕ್ತರಿಗೆ ದೂರು ಸಲ್ಲಿಸಿದರು.

ಇದೇ ಸಂದರ್ಭ ಲೋಕಾಯುಕ್ತ ಸರ್ಕಲ್ ಇನ್ಸ್‍ಪೆಕ್ಟರ್ ಜಿ.ಕೆ.ಸುಬ್ರಮಣಿ ಮಾತನಾಡಿ, ಸಾಕ್ಷ್ಯಾಧಾರದ ಮೇಲೆ ಸರಕಾರಿ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಸಾರ್ವಜನಿಕರು ಯಾವದೇ ದೂರು ನೀಡಿದರೂ ಸ್ವೀಕರಿಸಿ ಕ್ರಮ ಕೈಗೊಳ್ಳಲಾಗುವದು. ನಿಗದಿತ ಅವಧಿಯಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ಲೋಕಾಯುಕ್ತ ಇಲಾಖೆಯಿಂದ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಲಾಗುವದು. ಇದೇ ಸಭೆಯಲ್ಲಿ ಸಾರ್ವಜನಿಕರು ದೂರುಗಳನ್ನು ನೇರವಾಗಿ ಸಲ್ಲಿಸಬಹುದೆಂದು ತಿಳಿಸಿದರು.

ಸಭೆಯಲ್ಲಿ ತಾಲೂಕು ತಹಶೀಲ್ದಾರ್ ಮಹೇಶ್, ಶಿರಸ್ತೆದಾರ್ ಎಚ್.ಕೆ. ಪೊನ್ನು, ಲೋಕಾಯುಕ್ತ ಸಿಬ್ಬಂದಿಗಳಾದ ಕರ್ತಮಯ್ಯ, ಮಂಜುನಾಥ್ ಮತ್ತಿತರರು ಹಾಜರಿದ್ದರು.