ಸೋಮವಾರಪೇಟೆ, ನ. 25: ಕಳೆದ 9 ವರ್ಷಗಳ ಕಾಲ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ಇದೀಗ ಹುಣಸೂರು ನಗರ ಸಭೆಯ ವ್ಯವಸ್ಥಾಪಕರಾಗಿ ಪದೋನ್ನತಿ ಹೊಂದಿದ ಪಿಯೂಸ್ ಡಿಸೋಜ ಅವರನ್ನು ಪ.ಪಂ. ವತಿಯಿಂದ ಬೀಳ್ಕೊಡಲಾಯಿತು.

ಪ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಂಚಾಯಿತಿ ಸಿಬ್ಬಂದಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದು, ಡಿಸೋಜ ಅವರನ್ನು ಸನ್ಮಾನಿಸಿ, ಬೀಳ್ಕೊಟ್ಟರು. ಈ ಸಂದರ್ಭ ಪ.ಪಂ. ಮುಖ್ಯಾಧಿಕಾರಿ ನಟರಾಜ್, ಪ.ಪಂ. ಆರೋಗ್ಯ ನಿರೀಕ್ಷಕ ಉದಯಕುಮಾರ್, ನಿವೃತ್ತ ಸಿಬ್ಬಂದಿಗಳಾದ ದಾಮೋಧರ್ ಗಟ್ಟಿ, ವೆಂಕಟರಮಣ ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಿದ್ದರು.