ಮಡಿಕೇರಿ, ನ. 25: 2017 ರಲ್ಲಿ ಪ್ರಾರಂಭಗೊಂಡ ಕೊಡಗು ಕಲಾ ಉತ್ಸವ 2018 ರಲ್ಲಿಯೂ ಮುಂದುವರಿಯಿತು. ಈ ವರ್ಷ ಮೂರನೇ ಕಲಾ ಉತ್ಸವ ಡಿಸೆಂಬರ್ 21 ರಿಂದ 27 ರವರೆಗೆ ನಡೆಯುತ್ತದೆ. ಕೊಡಗು, ಕರ್ನಾಟಕ, ಕೇರಳ ಹಾಗೂ ಇತರ ರಾಜ್ಯಗಳಿಂದ ಸುಮಾರು 30 ಕಲಾವಿದರಿಂದ ಕಲಾಕೃತಿಗಳ ನಿರ್ಮಾಣ ಹಾಗೂ ಪ್ರದರ್ಶನ ಮಾಡಲಾಗುವದು. ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿಗಳ ಕಲಾ ಉತ್ಸವ ನಡೆಸಲಾಗುವದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖಾ ಪ್ರಕಟಣೆ ತಿಳಿಸಿದೆ.