ಸೋಮವಾರಪೇಟೆ, ನ. 26: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸರಕಾರಿ ಶಾಲೆಯ ಮಕ್ಕಳಿಗೆ ಆಯೋಜಿಸಲಾಗಿದ್ದ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮ ಗೋಪಾಲ್ ಚಾಲನೆ ನೀಡಿದರು.
ಸೋಮವಾರಪೇಟೆ ಕ್ಲಸ್ಟರಿಗೆ ಒಳಪಡುವ ಸರಕಾರಿ ಪ್ರಾಥಮಿಕ ಶಾಲೆಗಳ 93 ವಿದ್ಯಾರ್ಥಿಗಳ ಪ್ರಥಮ ತಂಡಕ್ಕೆ ಶುಭ ಹಾರೈಸಲಾಯಿತು. ಈ ಸಂದÀರ್ಭ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ತಂಗಮ್ಮ, ಬಿ.ಇ.ಒ. ಕಚೇರಿಯ ವ್ಯವಸ್ಥಾಪಕ ಚನ್ನಪ್ಪ, ನೋಡಲ್ ಅಧಿಕಾರಿ ಶೇಖರ್, ಶಿಕ್ಷಕರಾದ ಕೆ. ಮೂರ್ತಿ, ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.