ಮಡಿಕೇರಿ, ನ. 25: ಗೋಣಿಕೊಪ್ಪ ಲಯನ್ಸ್ ಸಂಸ್ಥೆ ವತಿಯಿಂದ ಕರ್ನಾಟಕ ಆಯುಶ್ ಇಲಾಖೆ ಸಹಯೋಗದೊಂದಿಗೆ ತಾ. 26 ರಂದು (ಇಂದು) ನಾಲ್ಕೇರಿಯ ಗ್ರಾ.ಪಂ. ಸಭಾಂಗಣದಲ್ಲಿ ಆರ್ಯುವೇದ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ಬೆಳಿಗ್ಗೆ 10.30 ರಿಂದ ಶಿಬಿರ ಆರಂಭವಾಗಲಿದೆ. ಅತಿಥಿಗಳಾಗಿ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಗ್ರಾ.ಪಂ. ಅಧ್ಯಕ್ಷ ಅಲ್ಲುಮಾಡ ಮುತ್ತಪ್ಪ ಭಾಗವಹಿಸಲಿದ್ದಾರೆ. ಡಾ. ವಿಶ್ವ ತಿಲಕ್ ಹಾಗೂ ಡಾ. ಶ್ರೀನಿವಾಸ್ ತಪಾಸಣೆ ನಡೆಸುವರು.