ನಾಪೆÇೀಕ್ಲು: ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ಮಕ್ಕಳನ್ನು ಸಣ್ಣ ಪ್ರಾಯದಲ್ಲಿಯೇ ಸುಶಿಕ್ಷಿತವಾಗಿ ಬೆಳೆಸುವದರ ಮೂಲಕ ಸುಭದ್ರ ಭಾರತದ ಕನಸು ನನಸಾಗಲು ಎಲ್ಲಾ ಪೆÇೀಷಕರು, ಶಿಕ್ಷಕರು ಪ್ರಯತ್ನಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಸಲಹೆ ನೀಡಿದರು.

ನಾಪೆÇೀಕ್ಲು ಭಗವತಿ ದೇವಳದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ನಾಪೆÇೀಕ್ಲು ಅಂಗನವಾಡಿ ಮಕ್ಕಳ, ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪುಟ್ಟ ಮಕ್ಕಳನ್ನು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರೆ ಮಕ್ಕಳಲ್ಲಿರುವ ಭಯ, ನಾಚಿಕೆ ಸ್ವಭಾವ ದೂರವಾಗುತ್ತದೆ. ಇದು ಅವರ ಮುಂದಿನ ಭವಿಷ್ಯಕ್ಕೆ ಬುನಾದಿಯಾಗುತ್ತದೆ ಎಂದರು.

ಭಗವತಿ ದೇವಳದ ಗೌರದ ಕಾರ್ಯದರ್ಶಿ ಅರೆಯಡ ಡಿ. ಸೋಮಪ್ಪ ಮಾತನಾಡಿ, ಸರಕಾರ ಪುಟ್ಟ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಕುಲ್ಲೇಟಿರ ಮಾದಪ್ಪ ಉದ್ಘಾಟಿಸಿದರು. ವೇದಿಕೆಯಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಎ. ಮಹಮ್ಮದ್, ಚೀಯಕಪೂವಂಡ ಮುತ್ತುರಾಣಿ ಅಚ್ಚಪ್ಪ, ಕುಲ್ಲೇಟಿರ ಜ್ಯೋತಿ ನಾಚಪ್ಪ, ಶಿವಚಾಳಿಯಂಡ ದೇವಕಿ, ಮಣವಟ್ಟಿರ ಮೀರಾ, ಹಳೇ ತಾಲೂಕು ಅಂಗನವಾಡಿ ಶಿಕ್ಷಕಿ ಭಾಗ್ಯವತಿ, ಚೋನಕೆರೆ ಅಂಗನವಾಡಿ ಶಿಕ್ಷಕಿ ಪವಿತ್ರ, ನಾಪೆÇೀಕ್ಲು ಅಂಗನವಾಡಿ ಶಿಕ್ಷಕಿ ಜ್ಯೋತಿ ಇದ್ದರು.

ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳ ಛದ್ಮವೇಷ, ನೃತ್ಯ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಚೆಟ್ಟಳ್ಳಿ: ನೆಹರು ಯುವ ಕೇಂದ್ರ ಮಡಿಕೇರಿ ಹಾಗೂ ಜನಪರ ಸಂಘಟನೆ ಮಾಲ್ದಾರೆ ಇವರ ಸಂಯುಕ್ತ ಆಶ್ರಯದಲ್ಲಿ ಗುಡ್ಲೂರ್ ಸ.ಕಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು

ಶಾಲಾ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆಯಿತು. ಮಾಲ್ದಾರೆ ಜನಪರ ಸಂಘಟನೆಯ ವತಿಯಿಂದ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಪೆನ್ನು, ಪೆನ್ಸಿಲ್ ಸೇರಿದಂತೆ ಇತರ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ರಘು ಕರುಂಬಯ್ಯ, ಕಲಾವಿದ ಬಾವ ಮಾಲ್ದಾರೆ, ಶಾಲಾ ಶಿಕ್ಷಕಿ ನಂದಿತಾ, ಅಂಗನವಾಡಿ ಕಾರ್ಯಕರ್ತೆ ಕಮಲ, ಆಶಾ ಕಾರ್ಯಕರ್ತೆ ರೂಶ್ನಿ, ಜನಪರ ಸಂಘದ ಅಧ್ಯಕ್ಷ ಆಂಟೋನಿ, ಖಜಾಂಚಿ ಹರಿಪ್ರಸಾದ್, ವಿನಿಲ್, ಅಪ್ಪು, ಜಮೀಲ್, ರಂಜು, ಜಬೀರ್, ಇಸ್ಮಾಯಿಲ್, ಮಸೂಕ್, ಸುಗು ಸೇರಿದಂತೆ ಮತ್ತಿತರರು ಇದ್ದರು.

ಮೂರ್ನಾಡು: ಮೂರ್ನಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದೊಂದಿಗೆ ಮಕ್ಕಳ ಹಕ್ಕುಗಳ ಹಬ್ಬವನ್ನು ಏರ್ಪಡಿಸಲಾಗಿತ್ತು. ಇದರ ಅಂಗವಾಗಿ ಮಕ್ಕಳ ಹಕ್ಕುಗಳ ಅರಿವು ಕುರಿತು ಜಾಥಾ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಸಿಡಬ್ಲ್ಯುಸಿ ಸದಸ್ಯ ಲತೀಫ್ ಮಕ್ಕಳ ಹಕ್ಕುಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತರಾದ ಸ್ವಾತಿ ಮತ್ತು ಜಯಮ್ಮ ಮಕ್ಕಳಿಗೆ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ನಡೆಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಕರಿಕೆ: ಸ.ಹಿ.ಪ್ರಾ. ಶಾಲೆ ಕರಿಕೆ ಕಾಲೋನಿಯಲ್ಲಿ ನೆಹರು ಅವರ ಜನ್ಮ ದಿನಾಚರಣೆ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ನೆಹರು ಅವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಪೂಜಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿದ್ಯಾರ್ಥಿ ಗೋಪಿಕಾ ಹಾಗೂ ಮುಖ್ಯ ಭಾಷಣಕಾರರಾಗಿ ಭಾವನಾ ಎಂ.ಪಿ. ಆಗಮಿಸಿ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಮುಖ್ಯ ಶಿಕ್ಷಕ ಕುಮಾರ್ ಎನ್.ಎಸ್., ಶಿಕ್ಷಕರಾದ ಗಣೇಶಾಚಾರಿ ಉಪಸ್ಥಿತರಿದ್ದರು. ಗೌತಮಿ ನಿರೂಪಿಸಿ, ಶರಣ್ಯ ವಂದಿಸಿದರು.

ಕೂಡಿಗೆ: ಕೂಡ್ಲೂರಿನ ಟೈನಿ ಟಾಟ್ಸ್ ಪ್ರಿ ಕೆ.ಜಿ. ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ವರದ, ಶಾಲೆಯ ಮುಖ್ಯಸ್ಥೆ ಪುಷ್ಪಾವರದ, ವೀಣಾ ಮುಕೇಶ್ ಮತ್ತು ಪೆÇೀಷಕ ವೃಂದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಕ್ಕಳನ್ನು ರಂಜಿಸಲು ಪೋಷಕರು ಮತ್ತು ಶಿಕ್ಷಕರು ನೃತ್ಯ ಪ್ರದರ್ಶನ ಮಾಡಿದರು. ಮಕ್ಕಳಿಗೆ ಆಟೋಟ ಸ್ಪರ್ಧೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು. ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಸಸಿಗಳನ್ನು ನೀಡಿ ಮರ ಬೆಳೆಸಿ ಪ್ರಕೃತಿ ಉಳಿಸಿ ಎನ್ನುವ ಸಂದೇಶವನ್ನು ನೀಡಲಾಯಿತು.

ಮಡಿಕೇರಿ: ಮಡಿಕೇರಿ ಮಹದೇವಪೇಟೆಯ ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ವತಿಯಿಂದ ಕುಲಬಾಂಧವರ ಮಕ್ಕಳಿಗೆ, ಮಕ್ಕಳಿಂದಲೇ, ಮಕ್ಕಳಿಗೋಸ್ಕರ ಮಕ್ಕಳ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.

ಪುಟ್ಟ ಮಕ್ಕಳಾದ ದೀಷ್ಣಾ ನಾಗೇಶ್ ಮತ್ತು ಹಂಸಿಣಿ ಜಗದೀಶ್ ಅವರು ಪ್ರಾರ್ಥಿಸಿದರು. ಶ್ರೀನಿಧಿ ದೇವರಾಜು ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಪಾ ಲೋಕೇಶ್ ವಹಿಸಿದ್ದರು. ಉದ್ಘಾಟಕರಾಗಿ ಆಗಮಿಸಿದ್ದ ವಿಘ್ನೇಶ್ ಸುಜಯ್ ಮತ್ತು ಮೋಹಿತ ಪ್ರಕಾಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿಘ್ನೇಶ್ ಅತಿಥಿಗಳಾಗಿ ಆಗಮಿಸಿದ್ದ ತನ್ಮಯಿ ಮಹೇಶ್ ದಿನದ ಮಹತ್ವದ ಬಗ್ಗೆ ವಿವರಿಸಿದರು. ಮೋಹಿತ್ ಮತ್ತು ಶ್ರೇಷ್ಠಾ ಅವರು ಜನಪದ ಗೀತೆಯನ್ನು ಹಾಡಿದರು. ಶ್ರೇಯಾ ಉಮೇಶ್, ಲಖಿತಾ ಉಮೇಶ್, ನಿಶ್ಮಿತಾ ದಯಾನಂದ ದೇಶಭಕ್ತಿ ಗೀತೆಯನ್ನು ಹಾಡಿದರು.

ಮಕ್ಕಳಿಗೆ ದೇಶಭಕ್ತಿ ಗೀತೆ, ಕನ್ನಡ ನಾಡಗೀತೆ, ವಚನಗಾಯನ ಸ್ಪರ್ಧೆಗಳನ್ನು, ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮೀನಾಕ್ಷಿ ಮನುಕುಮಾರ್ ವಂದಿಸಿ, ಚಿನ್ಮಯಿ ಜಗದೀಶ್ ನಿರೂಪಿಸಿದರು.ಗೋಣಿಕೊಪ್ಪಲು: ರೋಟರಿ ಕ್ಲಬ್ ಗೋಣಿಕೊಪ್ಪಲಿನ ಮಹಿಳಾ ಅಂಗವಾದ ಆನ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ದೇವರಪುರ ಗ್ರಾಮದ ‘ಅಮೃತವಾಣಿ’ಯ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.

ವಿಶೇಷಚೇತನ ಮಕ್ಕಳು ಅತ್ಯಂತ ಸುಂದರವಾಗಿ ನೃತ್ಯವನ್ನು ಪ್ರದರ್ಶಿಸಿದರು. ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ರೋಟರಿ ಆನ್ಸ್ ಕ್ಲಬ್ ವತಿಯಿಂದ ಮಕ್ಕಳಿಗೆ ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ರೋಟರಿ ಸಂಸ್ಥೆಯ ಅಧ್ಯಕ್ಷರಾದ ಕಾಡ್ಯಮಾಡ ಬಿ. ನೇವಿನ್, ಡಾ. ಚಂದ್ರಶೇಖರ್, ಸಜನ್ ಚಂಗಪ್ಪ, ಎಂ.ಎಂ. ಗಣಪತಿ, ಎಂ.ಕೆ. ಡೀನಾ, ಅನೀಶ್ ಮಾದಪ್ಪ, ಇಮ್ಮಿ ಉತ್ತಪ್ಪ, ಜಮುನಾ, ತಿಮ್ಮಯ್ಯ, ಕುಮಾರಿ ಸುಭಾಶ್, ಯಶೋದಾ ಚಂದ್ರಶೇಖರ್, ಸುಭಾಷಿಣಿ, ಎಸ್. ಕುಮಾರ್ ಹಾಗೂ ಆನ್ಸ್ ಕ್ಲಬ್‍ನ ಅಧ್ಯಕ್ಷೆ ಮಮತ ಹೆಗ್ಗಡೆ, ಕಾರ್ಯದರ್ಶಿ ಪವಿತ್ರಾ ನೇವಿನ್, ಸಪ್ನಾ ಚಂಗಪ್ಪ, ರಾಜೇಶ್ವರಿ, ಶಾರಾ ಚಿಣ್ಣಪ್ಪ, ಜೂಲಿ ಮಾದಪ್ಪ, ಶಾಂತಾ ಗಣಪತಿ ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅಮೃತವಾಣಿ ಶಾಲೆಯ ಫಾ. ಜ್ಯೋತಿಲಾಲ್ ಮತ್ತು ಶಿಕ್ಷಕಿಯರು ನಡೆಸಿಕೊಟ್ಟರು.