ಮಡಿಕೇರಿ,ನ.24: ದಿನೇ ದಿನೇ ಕ್ಷೀಣಿಸುತ್ತಿರುವ ಕೊಡವ ಸಮುದಾ ಯದ ಉಳಿವಿಗಾಗಿ ಕೊಡವ ಲ್ಯಾಂಡ್ ಸ್ಥಾಪನೆಯೊಂದಿಗೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ರ ವಿಧಿಯನ್ವಯ ರಾಜ್ಯಾಂಗ ಖಾತ್ರಿಗೆ ಒಳಪಡಿಸುವ ಮೂಲಕ ಮಡಿಕೇರಿ,ನ.24: ದಿನೇ ದಿನೇ ಕ್ಷೀಣಿಸುತ್ತಿರುವ ಕೊಡವ ಸಮುದಾ ಯದ ಉಳಿವಿಗಾಗಿ ಕೊಡವ ಲ್ಯಾಂಡ್ ಸ್ಥಾಪನೆಯೊಂದಿಗೆ, ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340 ಮತ್ತು 342ರ ವಿಧಿಯನ್ವಯ ರಾಜ್ಯಾಂಗ ಖಾತ್ರಿಗೆ ಒಳಪಡಿಸುವ ಮೂಲಕ ವ್ಯಕ್ತಪಡಿಸಿದರು.ಸಿಎನ್‍ಸಿ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ಆಯೋಜಿಸ ಲಾಗಿದ್ದ 29ನೇ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡವರ ಸ್ವಯತ್ತತೆಗಾಗಿ ಸಿಎನ್‍ಸಿ ನಡೆಸುತ್ತಿರುವ ಹಕ್ಕೊತ್ತಾಯಗಳನ್ನು ರಾಷ್ಟ್ರೀಯ ನೀತಿಯೆಂದು ಕೇಂದ್ರ ಸರ್ಕಾರ ಪರಿಗಣಿ ಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಕೇಂದ್ರ ಸರ್ಕಾರ ಅಸ್ಸಾಂನಲ್ಲಿರುವ 6 ಬುಡಕಟ್ಟು ಕುಲಗಳನ್ನು ರಕ್ಷಿಸಲು ಕಳೆದ 2019ರ ಫೆಬ್ರವರಿಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ರಚಿಸಿದ್ದು, ಇನ್ನೇನು ಪಾರ್ಲಿಮೆಂಟಿನಲ್ಲಿ ಚರ್ಚೆಗೆ ಬರಲಿದೆ. ಅಂತೆಯೇ ಕರ್ನಾಟಕದಲ್ಲಿ ಹಾಲುಮತ, ಕುರುಬ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಕುಲಶಾಸ್ತ್ರ ಅಧ್ಯಯನ ನಡೆಸಲಾಗುತ್ತಿದೆ. ಇದರಂತೆಯೇ ಕೊಡವರ ಕುಲಶಾಸ್ತ್ರ ಅಧ್ಯಯನ ನಡೆಸಿ ಕೊಡವರನ್ನು ಶೆಡ್ಯೂಲ್ ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಕೊಡವರ ಕುಲಶಾಸ್ತ್ರ ಅಧ್ಯಯನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ ಹಿನ್ನೆಲೆ ಕೇಂದ್ರ ಸರ್ಕಾರದಿಂದ 2015ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಆದೇಶ ಬಂದಿದೆ. ಆದರೆ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಕೊಡವರ ಕುಲಶಾಸ್ತ್ರ ಅಧ್ಯಯನ ಬಿಟ್ಟು ಕೊಡವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಧ್ಯಯನ ಮಾಡುವ ಪ್ರಯತ್ನ ನಡೆದಿದೆ. ಈ ಮೂಲಕ ಕೊಡವರಿಗೆ ಅನ್ಯಾಯವೆಸಗಲಾಗುತ್ತಿದೆ ಎಂದು ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಕೊಡವರ ಸಾಂಸ್ಕøತಿಕ ತಾಯಿ ಬೇರು ಕೊಡಗಿನಲ್ಲಲ್ಲದೇ ಬೇರೆಲ್ಲೂ ಇಲ್ಲ.

(ಮೊದಲ ಪುಟದಿಂದ) ಈ ಹಿನ್ನೆಲೆ ಸಿಎನ್‍ಸಿ ಸಂಘಟನೆಯು ಕಳೆದ 28 ವರ್ಷ ಗಳಿಂದ ಕೊಡವ ಲ್ಯಾಂಡ್‍ಗಾಗಿ ಶಾಂತಿಯುತ ಹೋರಾಟ ಮಾಡುತ್ತಾ ಬಂದಿದೆ. ಈ ಮಧ್ಯೆ ಕೆಲವರು ಸಂಘಟನೆಯ ಹೋರಾಟವನ್ನು ಅಪಹಾಸ್ಯ ಮಾಡುವ ಮೂಲಕ ಕೊಡವರಿಗೆ ಅವಮಾನ ಮಾಡುತ್ತಿದ್ದಾರೆ. ಎಡಪಂಥೀಯ ಚಿಂತನೆಯ ತುಕ್ಡೆ ತುಕ್ಡೆ ತಂಡದಿಂದ ಇಂತಹ ಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಕಿಡಿಕಾರಿದರು.

ಕೊಡವರ ಸಾಂಪ್ರದಾಯಿಕ ಜನ್ಮಭೂಮಿಯಾಗಿದ್ದ ಕೊಡಗು ಸಿ. ರಾಜ್ಯವನ್ನು 1956ರಲ್ಲಿ ಕರ್ನಾಟಕ ದೊಂದಿಗೆ ವಿಲೀನ ಗೊಳಿಸಿದ ನಂತರದಿಂದಲೂ ಕೊಡವರಿಗೆ ಅನ್ಯಾಯವಾಗುತ್ತಲೇ ಬರುತ್ತಿದೆ. ಕೊಡವರ ಹಕ್ಕುಬಾಧ್ಯತೆಗಳನ್ನು ಕಾಪಾಡುವ ಉದ್ದೇಶದಿಂದ ಸಿಎನ್‍ಸಿ ಕಾರ್ಯನಿರ್ವಹಿಸುತ್ತಿದೆಯೇ ಹೊರತು ಬೇರೆ ಜಾತಿಗಳ ನಡುವೆ ಸಂಘರ್ಷಕ್ಕೆ ಇಳಿದಿಲ್ಲ. ಕೊಡವರು ನಿಜವಾದ ‘ಟ್ರೈಬ್ಸ್’ಗಳಾಗಿದ್ದು, ಇದಕ್ಕೆ ಸಂವಿಧಾನದ ಖಾತ್ರಿ ಬೇಕು. ಅದನ್ನು (ಮೊದಲ ಪುಟದಿಂದ) ಈ ಹಿನ್ನೆಲೆ ಸಿಎನ್‍ಸಿ ಸಂಘಟನೆಯು ಕಳೆದ 28 ವರ್ಷ ಗಳಿಂದ ಕೊಡವ ಲ್ಯಾಂಡ್‍ಗಾಗಿ ಶಾಂತಿಯುತ ಹೋರಾಟ ಮಾಡುತ್ತಾ ಬಂದಿದೆ. ಈ ಮಧ್ಯೆ ಕೆಲವರು ಸಂಘಟನೆಯ ಹೋರಾಟವನ್ನು ಅಪಹಾಸ್ಯ ಮಾಡುವ ಮೂಲಕ ಕೊಡವರಿಗೆ ಅವಮಾನ ಮಾಡುತ್ತಿದ್ದಾರೆ. ಎಡಪಂಥೀಯ ಚಿಂತನೆಯ ತುಕ್ಡೆ ತುಕ್ಡೆ ತಂಡದಿಂದ ಇಂತಹ ಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಕಿಡಿಕಾರಿದರು.

ಕೊಡವರ ಸಾಂಪ್ರದಾಯಿಕ ಜನ್ಮಭೂಮಿಯಾಗಿದ್ದ ಕೊಡಗು ಸಿ. ರಾಜ್ಯವನ್ನು 1956ರಲ್ಲಿ ಕರ್ನಾಟಕ ದೊಂದಿಗೆ ವಿಲೀನ ಗೊಳಿಸಿದ ನಂತರದಿಂದಲೂ ಕೊಡವರಿಗೆ ಅನ್ಯಾಯವಾಗುತ್ತಲೇ ಬರುತ್ತಿದೆ. ಕೊಡವರ ಹಕ್ಕುಬಾಧ್ಯತೆಗಳನ್ನು ಕಾಪಾಡುವ ಉದ್ದೇಶದಿಂದ ಸಿಎನ್‍ಸಿ ಕಾರ್ಯನಿರ್ವಹಿಸುತ್ತಿದೆಯೇ ಹೊರತು ಬೇರೆ ಜಾತಿಗಳ ನಡುವೆ ಸಂಘರ್ಷಕ್ಕೆ ಇಳಿದಿಲ್ಲ. ಕೊಡವರು ನಿಜವಾದ ‘ಟ್ರೈಬ್ಸ್’ಗಳಾಗಿದ್ದು, ಇದಕ್ಕೆ ಸಂವಿಧಾನದ ಖಾತ್ರಿ ಬೇಕು. ಅದನ್ನು ಸೇರಿದೆ. ಇದನ್ನು ಸಂರಕ್ಷಿಸಲು ಕೊಡವ ಬುಡಕಟ್ಟು ಕುಲವನ್ನು ವಿಶ್ವಸಂಸ್ಥೆಯ ಯುನೆಸ್ಕೋದ ಇಂಟ್ಯಾಂಜಿಬಲ್ ಹೆರಿಟೇಜ್ ಪಟ್ಟಿಗೆ ಸೇರಿಸಬೇಕು. ಸಂವಿಧಾನದ 6ನೇ ಶೆಡ್ಯೂಲ್ ಪ್ರಕಾರ ಸ್ವಾಯತ್ತತೆ ರಚನೆಯಾಗಬೇಕು. ಕೊಡವ ಲ್ಯಾಂಡ್ ಕೇಂದ್ರಾಡಳಿತ ಪ್ರದೇಶ ನಿರ್ಮಾಣವಾಗಬೇಕು ಎಂದು ಸಿಎನ್‍ಸಿ ಹೋರಾಟ ನಡೆಸುತ್ತಿದೆ ಎಂದು ನಾಚಪ್ಪ ತಿಳಿಸಿದರು.

ಸಿಎನ್‍ಸಿ ಸಂಘಟನೆಯು ತನ್ನ ಗುರಿಮುಟ್ಟುವ ತನಕ ಹೋರಾಟ ನಡೆಸಲಿದೆ. ಸಂಘಟನೆಯ ಹೋರಾಟಕ್ಕೆ ಮಾಜೀ ಕೇಂದ್ರ ಸಚಿವ ಸುಬ್ರಮಣ್ಯನ್ ಸ್ವಾಮಿ ಬೆಂಬಲವಾಗಿ ನಿಂತಿದ್ದಾರೆ. ಇದರೊಂದಿಗೆ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮುಖಂಡರಾದ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಪ್ರಸ್ತುತ ಕೇಂದ್ರ ಹಾಗೂ ರಾಜ್ಯದಲ್ಲೂ ಕೊಡವ ಸ್ನೇಹಿ ಸರ್ಕಾರಗಳಿದ್ದು, ಸಿಎನ್‍ಸಿಯ ಬೇಡಿಕೆಗಳನ್ನು ಈಡೇರಿಸುವ ಭರವಸೆ ಮೂಡಿದೆ ಎಂದು ನಾಚಪ್ಪ ಹೇಳಿದರು.

ಸಂಘಟನೆಯ ಹಕ್ಕೊತ್ತಾಯ ಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಾಗಿದೆ. ಯಾವ ಹೋರಾಟವೂ ಇಲ್ಲಿಯವರೆಗೆ ವ್ಯರ್ಥವಾಗಿಲ್ಲ. ಕೊಡವರು ಗುಲಾಮಿ ಮನಸ್ಥಿತಿಯಿಂದ ಹೊರಬಂದು ಸಂವಿಧಾನದತ್ತವಾಗಿರುವ ಸೌಲಭ್ಯಗಳನ್ನು ಪಡೆಯಲು ಹೋರಾಡಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಸಿಎನ್‍ಸಿ ಸಂಘಟನೆಯ ಮುಖಂಡರುಗಳಾದ ಚೇಂದಂಡ ಜೆಮ್ಸಿ ಪೊನ್ನಪ್ಪ, ಬೇಪಡಿಯಂಡ ಬಿದ್ದಪ್ಪ, ಪೊರಿಮಂಡ ದಿನಮಣಿ, ಪುಳ್ಳಂಗಡ ನಟೇಶ್, ಜಮ್ಮಡ ಮೋಹನ್, ಮುದ್ದಂಡ ತಿಮ್ಮಯ್ಯ, ಮುದ್ದಂಡ ನಾಣಿಯಪ್ಪ, ನಂದಿನೆರವಂಡ ಅಪ್ಪಯ್ಯ, ಕಾಳಿಮಾಡ ಡಿಕ್ಕಿ, ಕೋದೇಂಗಡ ಶಂಭು, ಕಲಿಯಂಡ ಮೀನಾ, ಅಪ್ಪಾರಂಡ ಮೀರಾ, ಅರೆಯಡ ಸವಿತ, ಬೊಟ್ಟಂಗಡ ಸವಿ, ಬಾಚಿನಾಡಂಡ ಚಿಣ್ಣಪ್ಪ, ಬೊಪ್ಪಂಡ ಬೊಳ್ಳಮ್ಮ, ಅಜ್ಜಮಾಡ ಅನಿತ, ಪುಲ್ಲೇರ ಸ್ವಾತಿ, ಬಾಚಮಂಡ ಕಸ್ತೂರಿ, ಕಲಿಯಂಡ ಪ್ರಕಾಶ್, ಬಾಚಮಂಡ ರಾಜ, ಕುಂಡ್ಯೋಳಂಡ ರಮೇಶ್, ಅಜ್ಜಿಕುಟ್ಟೀರ ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಗಾಂಧಿ ಮೈದಾನದಲ್ಲಿ ರಾಷ್ಟ್ರಧ್ವಜ ಮತ್ತು ಕೊಡವ ನ್ಯಾಷನಲ್ ಕೌನ್ಸಿಲ್ ಧ್ವಜಗಳನ್ನು ಆರೋಹಣ ಮಾಡಲಾಯಿತು. ದೇವಟಿಪರಂಬು ಹತ್ಯಾಕಾಂಡದಲ್ಲಿ ಮಡಿದವರು, ನಂತರದ ದಿನಗಳಲ್ಲಿ ಮೃತರಾದ ಕೊಡವರು ಮತ್ತು ಇತ್ತೀಚೆಗಷ್ಟೇ ನಿಧನರಾದ ಭಾರತ ಚುನಾವಣಾ ಆಯೋಗದ ಮಾಜೀ ಆಯುಕ್ತ ಟಿ.ಎನ್. ಶೇಷನ್ ಅವರುಗಳ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.