ಕುಶಾಲನಗರ, ನ. 24: ಎನ್‍ಸಿಸಿ ದಿನಾಚರಣೆ ಅಂಗವಾಗಿ ಕೂಡಿಗೆ ಸೈನಿಕ ಶಾಲೆಯ ಎನ್‍ಸಿಸಿ ಕೆಡೆಟ್‍ಗಳು ಕುಶಾಲನಗರದಲ್ಲಿ ಸ್ವಚ್ಛತಾ ಆಂದೋಲನ ನಡೆಸಿದರು.

ಶಾಲೆಯ 9ನೇ ತರಗತಿಯ 100 ಕ್ಕೂ ಅಧಿಕ ಎನ್‍ಸಿಸಿ ಕೆಡೆಟ್‍ಗಳು ಕುಶಾಲನಗರ ಗಣಪತಿ ದೇವಾಲಯ, ಅರಣ್ಯ ಇಲಾಖೆ ಕಚೇರಿ, ಸಾರಿಗೆ ಬಸ್ ನಿಲ್ದಾಣ, ಅಯ್ಯಪ್ಪಸ್ವಾಮಿ ದೇವಾಲಯದ ರಸ್ತೆಯವರೆಗೆ ಸ್ವಚ್ಛತೆ ನಡೆಸಿದರು.

ರಸ್ತೆ ಬದಿಗಳಲ್ಲಿ ಹರಡಿದ್ದ ಪ್ಲಾಸ್ಟಿಕ್ ಕಸ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿಗೊಳಿಸಿದರು. ಈ ಸಂದರ್ಭ ಶಾಲೆಯ ಎನ್‍ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ವಿಬಿನ್ ಕುಮಾರ್, ಲೆಫ್ಟಿನೆಂಟ್ ಗೋವಿಂದರಾಜು, ಅಧಿಕಾರಿಗಳಾದ ವೈ.ವಿ. ರಮಣ, ಜಿ.ಕೆ. ಮಂಜಪ್ಪ, ರಾಘವೇಂದ್ರ ರಾಜೇ ಅರಸ್, ಸುಬೇದಾರ್ ಎ.ಕೆ. ದಾಸ್, ಹವಾಲ್ದಾರ್ ರಾಕೇಶ್, ಮುಸ್ತಾಕ್ ಅಲಿ ಖಾನ್ ಮೊದಲಾದವರು ಇದ್ದರು.