*ಗೋಣಿಕೊಪ್ಪಲು, ನ. 22: ರೈತರು ಆದಾಯಗಳಿಸಲು ಪೂರಕವಾದ ಸಂಶೋದನೆಗಳು ನಡೆದಾಗ ಭತ್ತÀ ಬೆಳೆಯಲು ಆಸಕ್ತರಾಗುತ್ತಾರೆ ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ಎಸ್.ಪಿ. ನಟರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪೆÇನ್ನಂಪೇಟೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಪೆÇನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕ, ಕೃಷಿ ಮತ್ತು ತೋಟಗಾರಿಕಾ ಶಿವಮೊಗ್ಗ ಆಶ್ರಯದಲ್ಲಿ ನಡೆದ ಸಮಗ್ರ ಕೃಷಿ ಪದ್ದತಿ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಾನವನ ಆರೋಗ್ಯ ಕ್ಷೀಣವಾಗುತ್ತಿದ್ದಂತೆ ಹಿಂದೆ ಹಿರಿಯರು ಬಳಸುತ್ತಿದ್ದ ನವಣೆ, ಕೊರ್ಲೆಗಳ ಬೇಡಿಕೆ ಹೆಚ್ಚಾಗಿದೆ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗಿದ್ದು, ರೈತರ ಆರ್ಥಿಕ ಸ್ಥಿತಿಯನ್ನು ಎತ್ತರಿಸುತ್ತಿದೆ. ಇಂತದೇ ರೀತಿಯಲ್ಲಿ ಭತ್ತದ ತಳಿಗಳಲ್ಲಿಯೂ ಸಂಶೋಧನೆ ನಡೆದಾಗ ಮಾನವನ ಆರೋಗ್ಯಕ್ಕೆ ಬೇಕಾದಂತಹ ಭತ್ತದ ಬೀಜಗಳು ತಯಾರಾದಾಗ ರೈತರು ಭತ್ತದ ಬೆಳೆಯ ಬಗ್ಗೆ ಆಸಕ್ತರಾಗುತ್ತಾರೆ ಎಂದು ಸಲಹೆ ನೀಡಿದ್ದಾರೆ.

ನಮ್ಮ ಸಂಸ್ಕೃತಿಗೆ ಪೂರಕವಾಗಿ ಭತ್ತದ ಕೃಷಿಯನ್ನು ಮುಂದುವರೆಸಿ ಕೊಂಡು ಹೋಗಬೇಕು. ಜತೆಗೆ ಉಪ ಕಸುಬುಗಳನ್ನು ನಡೆಸಿದಾಗ ರೈತನ ಆರ್ಥಿಕ ಬಲ ಹೆಚ್ಚುತ್ತದೆ ಎಂದು ಹೇಳಿದರು.

ರೈತರು ವೈಜ್ಞಾನಿಕವಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ವಿಜ್ಞಾನಿಗಳು ನೀಡುವ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಸಮಗ್ರ ಕೃಷಿ ಪದ್ಧತಿಯನ್ನು ಮುಂದುವರೆಸಬೇಕೆಂದರು.

ಮುಖ್ಯ ಅತಿಥಿ ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಡಾ. ರಾಜು ಮಾತನಾಡಿ ಭತ್ತ ಬೆಳೆಯುವ ಕ್ಷೇತ್ರ ಕ್ಷೀಣಿಸುತ್ತಿದೆ. ಇದಕ್ಕೆ ಮುಖ್ಯ ಕಾರಣವೇ ಕೃಷಿ ಚಟುವಟಿಕೆಗೆ ಬೇಕಾದ ವಾತಾವರಣ, ಕಾರ್ಮಿಕ ಸಮಸ್ಯೆ ಮತ್ತು ಉತ್ತಮ ಬೆಲೆ ಕೃಷಿಕನಿಗೆ ಸಿಗದೇ ಇರುವದು ಕೊಡಗಿನ ವಾತಾವರಣಕ್ಕೆ ಅನುಗುಣವಾಗಿ ವಿವಿಧ ತಳಿಗಳನ್ನು ಬೆಳೆಂiÀiಲು ಬೀಜಗಳ ಸಂಶೋದನೆ ಆಗಬೇಕಾಗಿದೆ. ಸಾಂಪ್ರಾದಾಯಕ ಆಚರಣೆಯಲ್ಲಿ ಒಂದಾದಂತಹ ಕೃಷಿ ಪದ್ಧತಿಯನ್ನು ಮುಂದುವರೆಸಲು ತಮ್ಮ ಮನೆಗೆ ಬಳಸುವಷ್ಟಾದರೂ ಭತ್ತದ ಕೃಷಿಯನ್ನು ಮಾಡಿ ಎಂದು ಹೇಳಿದರು. ಸರ್ಕಾರ ರೈತರ ಆರ್ಥಿಕ ಪರಿಸ್ಥಿತಿಯನ್ನು ದ್ವಿಗುಣಗೊಳಿಸಲು ಹೆಕ್ಟೇರಿಗೆ 7500 ರೂಪಾಯಿ ಪೆÇ್ರೀತ್ಸಾಹ ಧನ ನೀಡಲು ಚಿಂತನೆ ಹರಿಸಿದೆ. ಇದರ ಸದುಪಯೋಗ ಪಡೆಸಿಕೊಳ್ಳಲು ಭತ್ತದ ಕೃಷಿಯತ್ತ ಆಸಕ್ತರಾಗಬೇಕು. ಮುಂದಿನ ವ್ಯವಸ್ಥೆಯಲ್ಲಿ ಕೇರಳ ರಾಜ್ಯದ ಮಾದರಿಯ ಪೆÇ್ರೀತ್ಸಾಹ ಧನ ನೀಡಲು ಸರ್ಕಾರದ ಮೇಲೆ ಕೃಷಿ ಇಲಾಖೆಯ ಪ್ರಮುಖರು ಒತ್ತಡ ಹೇರುತ್ತಿದ್ದಾರೆ. ಇಂತಹ ವ್ಯವಸ್ಥೆ ಅನುಷ್ಠಾನಗೊಂಡರೆ ರೈತರ ಆರ್ಥಿಕ ಸ್ಥಿತಿ ಸುದಾರಿಸುತ್ತದೆ ಎಂದು ಹೇಳಿದರು.

ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಮಂಡನೆಯಲ್ಲಿ ಸಂಬಾರ ಬೆಳೆಗಳ ಬಗ್ಗೆ ಅಪ್ಪಂಗಳ ಐ.ಐ.ಎಸ್.ಆರ್. ಮುಖ್ಯಸ್ಥ ಡಾ. ಅಂಕೇಗೌಡ, ತೋಟಗಾರಿಕೆ ಹಣ್ಣು, ತರಕಾರಿ, ಹೂ, ಔಷಧಿ ಮತ್ತು ಸುಗಂಧ ದ್ರೌವ್ಯ ಬೆಳೆಗಳ ವಿಚಾರವಾಗಿ ಗೋಣಿಕೊಪ್ಪಲು ಕೆ.ವಿ.ಕೆ. ವಿಜ್ಞಾನಿ ಡಾ. ದೇವಯ್ಯ, ಸಮಗ್ರ ಕೀಟ ಪೀಡೆ ನಿರ್ವಹಣೆ ಮಾಹಿತಿಯನ್ನು ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಡಾ. ಶಿವರಾಮ್ ಭಟ್, ಜೇನು ಕೃಷಿ ಪದ್ಧತಿಯ ಬಗ್ಗೆ ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು ಡಾ. ಆರ್.ಎಂ. ಕೆಂಚರೆಡ್ಡಿ, ಕೃಷಿ ಅರಣ್ಯ ಪದ್ಧತಿಗಳ ಮಾಹಿತಿಯನ್ನು ಪೆÇನ್ನಂಪೇಟೆ ಅರಣ್ಯ ವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗಡೆ ಮತ್ತು ಪಶುಸಂಗೋಪನೆ ವಿಚಾರವಾಗಿ ತಾಲೂಕು ಪಶುಪಾಲನಾ ಸಹಾಯಕ ನಿರ್ದೇಶಕ ಡಾ. ಸುರೇಶ್, ತೋಟಗಾರಿಕೆ ಇಲಾಖೆಯ ಸವಲತ್ತುಗಳ ಮಾಹಿತಿಯನ್ನು ದೀನಾ ಅವರು ನೀಡಿದರು.

ಕ್ಷೇತ್ರ ಪ್ರಾತ್ಯಕ್ಷಿಕೆಗಳ ಉದ್ಘಾಟನೆಯನ್ನು ಮೂಡಿಗೆರೆ ಕೃಷಿ ಮತ್ತು ತೋಟಗಾರಿಕೆ ಸಂಶೊಧನೆ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಎಂ. ಶಿವಪ್ರಸಾದ್ ಮತ್ತು ಮಳಿಗೆಗಳ ಉದ್ಘಾಟನೆಯನ್ನು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಡಾ. ರಾಜು ನೆರವೇರಿಸಿದರು. ವಿಸ್ತರಣಾ ಶಿಕ್ಷಣ ಘಟಕದ ವರದಿ ವಾಚನವನ್ನು ವಿಸ್ತರಣಾ ಮುಂದಾಳು ಡಾ. ಆರ್.ಎನ್. ಕೆಂಚರೆಡ್ಡಿ, ಕೃಷಿ ಮತ್ತು ತೋಟಗಾರಿಕಾ ಸಂಶೋದನಾ ಕೇಂದ್ರ ಕ್ಷೇತ್ರಾಧೀಕ್ಷ ಡಾ. ಹೆಚ್.ಎನ್. ಹೊಸಗೌಡ್ರು, ಮಾಡಿದರು. ಎ.ಎಸ್.ಎಫ್.ಕೆ. ಮತ್ತು ಲಯನ್ಸ್ ಸಂಸ್ಥೆ ಪಾಲಿಬೆಟ್ಟ ಇವರಿಂದ ಅಂಗಾಂಗ ದಾನ ಕುರಿತು ಪಾಲಿಬೆಟ್ಟ ಲಯನ್ಸ್ ಅಧ್ಯಕ್ಷೆ ಕನ್ನಿಕಾ ಮಾಹಿತಿ ನೀಡಿದರು. ಜೇನು ಕೃಷಿಯಲ್ಲಿ ತರಬೇತಿ ಹೊಂದಿದ ರೈತರಿಗೆ ಜೇನು ಪೆಟ್ಟಿಗೆಯನ್ನು ವಿತರಿಸಲಾಯಿತು. ಆವರಣದಲ್ಲಿ ಪಶುಸಂಗೋಪನೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪುತ್ತರಿ ರೈತ ಸಂಘ ಹಾಗೂ ಇತರ ರೈತರು ವಸ್ತುಪ್ರದರ್ಶನ ನೀಡಿ ಮಾಹಿತಿ ಹಂಚಿದರು.

ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜೆ.ಎಂ ದೇವಗಿರಿ ಸ್ವಾಗತಿಸಿ, ತೃತೀಯ ವರ್ಷದ ವಿದ್ಯಾರ್ಥಿನಿ ಹರ್ಷಲ್ ಪ್ರಾರ್ಥನೆ, ರೈತಗೀತೆ ಹಾಗೂ ವಂದನಾರ್ಪಣೆ ಯನ್ನು ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ಬೇಸಾಯಶಾಸ್ತ್ರದ ಪ್ರಾಧ್ಯಾಪಕ ಬಸವಲಿಂಗಯ್ಯ ನೆರವೇರಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಾಗಿ ರೈತರ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಅರ್ಥ ತುಂಬಿದರು.

ಚಿತ್ರ-ವರದಿ : ಎನ್.ಎನ್ ದಿನೇಶ್