*ಗೋಣಿಕೊಪ್ಪಲು, ನ. 23: ನಿತ್ಯ 10 ಲೀ. ಹಾಲು ನೀಡುತ್ತಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಬಾಳೆಲೆಯ ದೇವನೂರು ಗ್ರಾಮದÀಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಪೆÇೀಡಮಾಡ ಸ್ವಾತಿ ಕುಟ್ಟಯ್ಯ ಅವರಿಗೆ ಸೇರಿದ ಹಸುವೊಂದು ಹುಲಿಯ ಅಟ್ಟಹಾಸಕ್ಕೆ ಬಲಿಯಾಗಿದೆ. ಮನೆಯ ಸಮೀಪದ 100 ಮೀ. ಅಂತರದಲ್ಲಿದ್ದ ಕೊಟ್ಟಿಗೆ ಒಳಗೆ ನುಗ್ಗಿದ ಹುಲಿ ಹಸುವಿನ ಹಿಂಭಾಗ ವನ್ನು ಪೂರ್ಣ ತಿಂದು ಹಾಕಿದೆ. ಕೊಟ್ಟಿಗೆಯಲ್ಲಿ ಸುಮಾರು 13 ರಾಸುಗಳೊಂದಿಗೆ ಹಾಲು ನೀಡುತ್ತಿದ್ದ ಈ ಹಸುವು ಇತ್ತು. ರಾತ್ರಿ 10:45ರ ಸಮಯದಲ್ಲಿ ಕೊಟ್ಟಿಗೆಯ ಒಳಗೆ ಹುಲಿ ನುಸುಳಿ ಹಸುವಿನ ಮೇಲೆ ದಾಳಿ ನಡೆಸಿದೆ. ನಾಯಿಗಳು ಬೊಗಳುವ ಶಬ್ದ ಕೇಳುತ್ತಿತ್ತು. ಆದರೆ ಮನೆಯಿಂದ ಹೊರಗೆ ಬಂದು ನೋಡಲು ಸಾಧ್ಯ ವಾಗಿರಲಿಲ್ಲ ಎಂದು ಸ್ವಾತಿ ಕುಟ್ಟಯ್ಯ ಮಾಹಿತಿ ನೀಡಿದ್ದಾರೆ. ಪ್ರತಿನಿತ್ಯದ ಕಾಯಕದಂತೆ ಬೆಳಿಗ್ಗಿನ ಜಾವ 6:45ಕ್ಕೆ ಕೊಟ್ಟಿಗೆಗೆ ಗೋಪಾಲಕ ಬಂದು ನೋಡಿದಾಗ ಹಸು ಸತ್ತುಬಿದ್ದಿರುವದು ಗೋಚರಿಸಿದೆ. ಹಸು ಸತ್ತುಬಿದ್ದ ದೃಶ್ಯವನ್ನು ಕಂಡು ಮಾಲೀಕರಿಗೆ ಗೋಪಾಲಕ ಮಾಹಿತಿ ನೀಡಿದ್ದಾನೆ. ತಕ್ಷಣವೇ ಸ್ವಾತಿ ಕುಟ್ಟಯ್ಯ ಅವರು ಕೊಟ್ಟಿಗೆಗೆ ಬಂದು ನೋಡಿ ದುಃಖಿತ ರಾಗಿ ಕಣ್ಣೀರು ಹಾಕಿ ಮರುಗಿದ ಕರುಣಾಜನಕ ಸ್ಥಿತಿ ನೆರೆದವರ ಮನ ಕರಗಿಸಿತು.
ಮಾಧ್ಯಮದೊಂದಿಗೆ ಮಾತನಾಡಿದ ಸ್ವಾತಿ ಕುಟ್ಟಯ್ಯ ಅವರು ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಈ ರೀತಿಯ ಸಾಕು ಪ್ರಾಣಿಗಳು ಹುಲಿಯ ಬಾಯಿಗೆ ಆಹುತಿ ಆಗುತ್ತಿವೆ. ಹೆಚ್ಚಿನ ಭದ್ರತೆ ಒದಗಿಸದೇ
(ಮೊದಲ ಪುಟದಿಂದ) ಇರುವದು ಈ ಘಟನೆಗಳಿಗೆ ಕಾರಣ. ನಮ್ಮದೇ ಜಾಗ, ತೋಟಗಳಲ್ಲಿ ಹುಲಿ ನುಗ್ಗಿ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ ಎಂದರೆ ಅಧಿಕಾರಿಗಳ ಬೇಜವಾಬ್ದಾರಿತನ ಅಡಗಿದೆ ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಲು ವಿಳಂಬ ದೋರಣೆ ಮಾಡಿದ ಕಾರಣ ರೈತ ಸಂಘದ ಮುಖಂಡರುಗಳು, ಬೆಳೆಗಾರರು ಹಾಗೂ ಗ್ರಾಮಸ್ಥರು ಬಾಳೆಲೆ ಕೈನಾಟಿ ತಿರುವಿನಲ್ಲಿ ರಸ್ತೆತಡೆ ನಡೆಸಿ, ಪ್ರತಿಭಟನೆ ಮಾಡಿದರು.
ರೈತರಿಂದ ರಸ್ತೆ ತಡೆ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ,ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಮುಂದಾಳತ್ವದಲ್ಲಿ ರೈತ ಸಂಘದ ಮುಖಂಡರು ಪೋಡಮಾಡ ಸ್ವಾತಿ ಕುಟ್ಟಯ್ಯನವರ ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಸ್ಥಳದಿಂದ ದೂರವಾಣಿ ಮೂಲಕ ತಿತಿಮತಿ ಅರಣ್ಯ ಇಲಾಖೆಯ ಎಸಿಎಫ್ ಶ್ರೀಪತಿಯವರನ್ನು ಸಂಪರ್ಕಿಸಿದ ರೈತ ಮುಖಂಡರು ಕೂಡಲೇ ಸ್ಥಳಕ್ಕೆ ಆಗಮಿಸಿ ಹುಲಿಯನ್ನು ಹಿಡಿಯುವ ಪ್ರಯತ್ನ ನಡೆಸಬೇಕು ಹಾಗೂ ಇಲಾಖೆಯಿಂದ ತಕ್ಷಣ ಪರಿಹಾರ ನೀಡುವಂತೆ ಮನವಿ ಮಾಡಿದರು. ಎಸಿಎಫ್ ಶ್ರೀಪತಿಯವರು ಘಟನಾ ಸ್ಥಳಕ್ಕೆ ಆಗಮಿಸಿದರು.
ದ.ಕೊಡಗಿನ ವಿವಿಧ ಭಾಗದಲ್ಲಿ ನಿರಂತರ ಹುಲಿಯ ಹಾವಳಿಯಿಂದ ರೈತರ ಜಾನುವಾರುಗಳು ನಾಶವಾಗುತ್ತಿರುವ ಬಗ್ಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಬಾಳೆಲೆ,ಪೊನ್ನಂಪೇಟೆ,ಕೈನಾಟಿ ರಸ್ತೆಯ ಜಂಕ್ಷನ್ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳು ರಸ್ತೆ ತಡೆ ನಡೆಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಕೂಡಲೇ ಹುಲಿ ಹಿಡಿಯಲು ಬೋನ್ ಅಳವಡಿಸು ವಂತೆ, ಈ ಭಾಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹೆಚ್ಚಿನ ರೀತಿಯಲ್ಲಿ ಗಸ್ತು ತಿರುಗುವಂತೆ ಸ್ಥಳಕ್ಕೆ ಆಗಮಿಸಿದ ತಿತಿಮತಿ ಅರಣ್ಯ ಇಲಾಖೆಯ ಎಸಿಎಫ್ ಶ್ರೀಪತಿಯವರನ್ನು ಒತ್ತಾಯಿಸಿದರು.
ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸುವಂತೆ ರೈತರು ಪ್ರತಿಭಟನೆ ಯನ್ನು ಸಂಜೆಯ 4-30 ರ ಸಮಯದ ವರೆಗೂ ಮುಂದುವರಿಸಿದರು. ಅದರೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೇ ಇರುವುದನ್ನು ಮನಗಂಡ ರೈತರು ಮತ್ತೆ ರಸ್ತೆ ತಡೆ ನಡೆಸಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಅಧಿಕಾರಿಗಳ ವಿರುದ್ಧ ದಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಗೋಣಿಕೊಪ್ಪಲು ವೃತ್ತ ನೀರಿಕ್ಷಕ ರಾಮರೆಡ್ಡಿ ರೈತರ ಪ್ರತಿಭಟನೆ ಹಿಂಪಡೆಯುವ ಬಗ್ಗೆ ಚರ್ಚೆ ನಡೆಸಿದರು. ರಾಮರೆಡ್ಡಿಯವರ ಮದ್ಯಸ್ಥಿಕೆಯಲ್ಲಿ ಪ್ರತಿಭಟನೆ ಹಿಂಪಡೆಯುವ ಮೂಲಕ ರಸ್ತೆ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್,ಬಾಳೆಲ ಹೋಬಳಿ ಸಂಚಾಲಕ ಎಂ.ಪಿ.ಮಾಚಯ್ಯ,ಪೋಡಮಾಡ ಸುಕೇಶ್, ಕೊಕ್ಕೆಂಗಡ ರಂಜನ್, ಮಾಯಮುಡಿ ರೈತ ಮುಖಂಡರಾದ ಪುಚ್ಚಿಮಾಡ ರಾಯ್ ಮಾದಪ್ಪ, ಅಡ್ಡೆಂಗಡ ಅರುಣ್,ಅಜೆಯ್, ಮಾಚಂಗಂಡ ಸುಜಯ್ ಪೋಡಮಾಡ ಸುಬ್ರಮಣಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿ.ಎನ್.ಪ್ರಥ್ವಿ, ಪೊನ್ನಪ್ಪಸಂತೆ ಗ್ರಾಮ ಪಂಚಾಯ್ತಿ ಸದಸ್ಯ, ಆರ್ಎಂ.ಸಿ. ಮಾಜಿ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ,ಸೇರಿದಂತೆ ಗ್ರಾಮದ ಪ್ರಮುಖರಾದ ಕಾಡ್ಯಮಾಡ ಉದಯ ಉತ್ತಪ್ಪ, ಮೇಚಂಡ ಕಿಶ ಮಾಚಯ್ಯ, ಪುಚ್ಚಿಮಾಡ ಸಂತೋಷ್, ತೀತರಮಾಡ ಸುನೀಲ್, ಮಾಪಂಗಡ ಸಂಪತ್, ಪುಳ್ಳಂಗಡ ನಟೇಶ್, ಕಾಂಡೇರ ಪ್ರವೀಣ್., ಚಿಮ್ಮಣಮಾಡ ಕೃಷ್ಣ, ಅಡ್ಡೆಂಗಡ ಅರುಣ್, ಅಜಯ್, ರಾಕಿ ಪುಳ್ಳಂಗಡ ದೀನೆಶ್, ಸೇರಿದಂತೆ ಎಸ್.ಎಸ್ಸುರೇಶ್, ಜಗದೀಶ್, ಮಲ್ಚಿರ ಅಶೋಕ್, ಗಿರೀಶ್, ಕಿರುಗೂರು ಅಶೋಕ್, ರೆವಿನ್ಯೂ ಇಲಾಖೆಯ ಅಧಿಕಾರಿಗಳ ಹಲವಾರು ರೈತರು ಭಾಗವಹಿಸಿದ್ದರು.
- ದಿನೇಶ್ / ಜಗದೀಶ್