ಪೊನ್ನಂಪೇಟೆ, ನ.22 : ಇಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ತಾ. 26 ರಂದು ಸಂಜೆ 6 ಗಂಟೆಗೆ ದತ್ತೋತ್ಸವವನ್ನು ನಡೆಸಲಾಗುತ್ತದೆ.
ತಾ. 29 ರಂದು ಸಂಜೆ 6.30ಕ್ಕೆ ಪೊನ್ನಂಪೇಟೆಯ ಮುಖ್ಯ ಬೀದಿಗಳಲ್ಲಿ ಶ್ರೀ ಬಸವೇಶ್ವರ ಉತ್ಸವ ಮೂರ್ತಿಯ ಮೆರವಣಿಗೆಯನ್ನು ನಡೆಸಲಾಗುವದು. ಎರಡೂ ಕಾರ್ಯಕ್ರಮಕ್ಕೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಬೇಕಾಗಿ ದೇವಸ್ಥಾನ ಆಡಳಿತ ಮಂಡಳಿಯವರು ಕೇಳಿಕೊಂಡಿದ್ದಾರೆ.