ಸಿದ್ದಾಪುರ, ನ. 22: ಕುಶಾಲನಗರದಲ್ಲಿ ನಡೆದ ರಾಜ್ಯ ಮಟ್ಟದ ಫ್ರೌಢಶಾಲಾ ವಿಭಾಗದ ಬಾಲಕರ ಮ್ಯಾಟ್ ಕಬಡ್ಡಿಯಲ್ಲಿ ಸಿದ್ದಾಪುರದ ಶ್ರೀ ಕೃಷ್ಣ ವಿದ್ಯಾ ಮಂದಿರದ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ.

ಇತ್ತೀಚಿಗೆ ಕುಶಾಲನಗರದ ಜ್ಞಾನಗಂಗಾ ಶಾಲೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಫ್ರೌಢಶಾಲಾ ವಿಭಾಗದ ಜ್ಞಾನಗಂಗಾ ಕಪ್ ಮ್ಯಾಟ್ ಕಬಡ್ಡಿ ಲೀಗ್‍ನಲ್ಲಿ ಶ್ರೀ ಕೃಷ್ಣ ವಿದ್ಯಾ ಮಂದಿರದ ತಂಡವು ಪ್ರಥಮ ಬಹುಮಾನ ಪಡೆದುಕೊಂಡಿದೆ.

ಜ್ಞಾನಗಂಗಾ ಶಾಲಾ ಆವರಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆತಿಥೆಯ ಜ್ಞಾನಗಂಗಾ ತಂಡವನ್ನು 32-30 ಅಂಕಗಳ ಅಂತರದಿಂದ ಮಣಿಸಿ ಮೊದಲ ಸ್ಥಾನ ಪಡೆಯುವಲ್ಲಿ ಯಶಸ್ವಿ ಯಾಗಿದೆ. ಶ್ರೀ ಕೃಷ್ಣ ವಿದ್ಯಾ ಮಂದಿರ ತಂಡದ ಪಿ.ಎಸ್. ತಿಲಕ್ ಉತ್ತಮ ಆಲ್ ರೌಂಡರ್ ಆಗಿ ಹೊರ ಹೊಮ್ಮಿದ್ದಾರೆ. ಶಾಲೆಯ ಮುಖ್ಯೋ ಪಾಧ್ಯಾಯ ರಸಿತ ರಾಜೀವ್, ತರಬೇತುದಾರ ರಾಜಣ್ಣ, ದೈಹಿಕ ಶಿಕ್ಷಕ ಕವಿತೇಜ್ ಹಾಜರಿದ್ದರು.