ಮಡಿಕೇರಿ, ನ. 23: ತಾ. 22 ರಂದು ಮುಂಜಾನೆ ನಗರದ ನೆಹರೂ ಮಂಟಪದಲ್ಲಿ ಚಿರತೆ ಹೋಲುವ ಪ್ರಾಣಿಗಳು ಪತ್ತೆಯಾಗಿದ್ದು; ಪಹರೆ ಸಿಬ್ಬಂದಿ ಗಣೇಶ್ ಅವುಗಳ ಚಿತ್ರವನ್ನು ತಮ್ಮ ಫೋನಿನ ಕ್ಯಾಮರಾದಿಂದ ಸೆರೆಹಿಡಿದಿದ್ದರು ಈ ಸಂಬಂಧ ಅರಣ್ಯ ಇಲಾಖೆ ಕೆಲವು ಸಿಬ್ಬಂದಿ ತಾ. 22ರ ರಾತ್ರಿ ಕೆಲಕಾಲ ಮಂಟಪದಲ್ಲಿ ತಂಗಿದ್ದರು. ಕ್ಯಾಮರಾಗಳು ತಾ. 22 ರಂದು ಅಲಭ್ಯವಾಗಿದ್ದು, ತಾ. 23ರ ರಾತ್ರಿ 2,3 ಕ್ಯಾಮರಾಗಳನ್ನು ಮಂಟಪದ ಆವರಣದಲ್ಲಿ ಅಳವಡಿಸಿ ಪ್ರಾಣಿಗಳ ಪತ್ತೆಗಾಗಿ ಹಲವು ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ ಅಲ್ಲಿಯೇ ಇದ್ದು ತಪಾಸಣೆ ಮಾಡುವದಾಗಿ ಮಡಿಕೇರಿ ಉಪಸಂರಕ್ಷಣಾಧಿಕಾರಿ ಪ್ರಭಾಕರನ್ ತಿಳಿಸಿದ್ದಾರೆ.