ಮಡಿಕೇರಿ, ನ. 22: ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. 25ರಂದು ಕಾರ್ತಿಕ ಸೋಮವಾರದ ವಿಶೇಷ ಪೂಜೆಯೊಂದಿಗೆ, ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಕುಟುಂಬದ ಸೇವಾರ್ಥ ತೆಪ್ಪೋತ್ಸವ ನಡೆಯಲಿದೆ. ಸಂಜೆ 6.30ರ ಬಳಿಕ ಪೂಜಾದಿಗಳು ಆರಂಭಗೊಳ್ಳಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದ್ದಾರೆ.