ಮಡಿಕೇರಿ, ನ. 22: ಕೊಡ ವಾಮೆರ ಕೊಂಡಾಟ ಕೂಟದ ವತಿಯಿಂದ ಕೊಡವ ಜಾನಪದ ಕಳಿನಮ್ಮೆ ಆಚರಿಸಲು ನಿರ್ಧರಿಸಲಾಗಿದೆ.
ಇತ್ತೀಚೆಗೆ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಯಿತು. ಕೊಡವರು ಸೇರಿದಂತೆ ಇತರರು ಪುರಾತನ ಕಾಲದಿಂದ ಆಡಿ ನಲಿಯುತ್ತಿದ್ದ ಜಾನಪದೀಯ ಕ್ರೀಡೆಗಳಾದ ಲಗೋರಿ, ಲೆಗ್ಗೆ, ಚಿಣ್ಣಿದಾಂಡ್, ಕೇರ್ಬಲಿ, ಗೋಣಿತಾಟ್ ಓಟ, ತೆಂಗೆಪೋರ್, ಓಟ್ಬೊಡಿ, ಕೊತ್ತಿಪರ, ಚಿಲ್ಕಿ, ಗೋಲಿ, ಕೆರೆ ಏರಿ, ಪಯ್ಯು ನೆರಿ, ತೊಪ್ಪಕಳಿ, ಕಣ್ಣ್ಮುಚ್ಚಾಲೆ, ತಾರ್ಕೋಲ್, ಶಕ್ತಿಕೋಲ್, ಕವುಡಿಕಳಿ, ಕೊಡಮರಿಯೋಕಳಿ, ಕಟ್ಟೆಕಳಿ, ಸೇರಿದ ಕೊಡವ ಜಾನಪದ ಕಳಿನಮ್ಮೆಯನ್ನು ನಡೆಸಲು ನಿರ್ಣಯಿಸಲಾಯಿತು. 2020ರ ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಕೊಡವ ಜನಾಂಗಕ್ಕೆ ಅನುಕೂಲ ವಾಗುವಂತೆ, ಸ್ಥಳ ಹಾಗೂ ದಿನಾಂಕವನ್ನು ನಿರ್ಧರಿಸಿ, ಈ ಕಳಿನಮ್ಮೆಯನ್ನು ಆಯೋಜಿಸುವದರ ಮೂಲಕ, ಮುಂದಿನ ಪೀಳಿಗೆಗೆ, ಈಗಾಗಲೇ ನಶಿಸಿರುವ ಹಾಗೂ ಅಳಿವಿನ ಅಂಚಿನಲ್ಲಿರುವ ನಮ್ಮ ಪೂರ್ವಿಕರು ಆಡಿ ನಲಿಯುವದರ ಮೂಲಕ, ಅಂದಿನ ಮನರಂಜನೆಯ ಜೊತೆಗೆ ದೈಹಿಕ ಹಾಗೂ ಮಾನಸಿಕ ಸ್ಥಿಮಿತಕ್ಕಾಗಿ ಮತ್ತು ಬದುಕಿನಲ್ಲಾಗುವ ಏರಿಳಿತಗಳ ಜೊತೆಗೆ ಕಷ್ಟುಸುಖಗಳ ಅರಿವು ಮೂಡಿಸುತ್ತಿದ್ದ ಜಾನಪದೀಯ ಆಟಗಳನ್ನು ನವ ಪೀಳಿಗೆಗೆ ನೆನಪಿಸಿ, ಮತ್ತೊಮ್ಮೆ ಜಾನಪದೀಯ ಕ್ರೀಡೆಗಳ ಪುನರುತ್ಥಾನಕ್ಕೆ ಪ್ರಯತ್ನ ಮಾಡುವ ಸಲುವಾಗಿ, ಈ ನಮ್ಮೆಯನ್ನು ವರ್ಣರಂಜಿತವಾಗಿ ಆಚರಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಪೂರಕವಾಗಿ ತಜ್ಞರನ್ನೊಳಗೊಂಡಂತೆ ಹಿರಿಯರ, ಜಾನಪದ ಅನುಭವಿಗಳ ಸಭೆಯನ್ನು ಕರೆದು, ಕೂಟದ ನೇತೃತ್ವದಲ್ಲಿ ಉಪ ಸಮಿತಿ ಯೊಂದನ್ನು ರಚಿಸಿ, ಮುಂದಿನ ರೂಪುರೇಷೆಯನ್ನು ತಯಾರಿಸ ಲಾಗುವದು. ಹಾಗೇ ಕೊಡವಾಮೆರ ಕೊಂಡಾಟ ಕೂಟದ ಸದಸ್ಯರ ಮಕ್ಕಳಿಗೆ, ವಿದ್ಯಾನಿಧಿ ಹಾಗೂ ಕೂಟದ ಸದಸ್ಯರಿಗೆ ಮರಣ ನಿಧಿಯನ್ನು ಸ್ಥಾಪಿಸುವದು, ಜನಾಂಗ ಹಾಗೂ ಭಾಷೆಯ ಉಳಿವು ಬೆಳವಣಿಗೆಗೆ ಪೂರಕವಾಗುವಂತ ಯೋಜನೆಗಳನ್ನು ರೂಪಿಸಲು ಚಿಂತಿಸಲಾಯಿತು. ಜನಾಂಗದ ವಿರುದ್ಧ ಭಾವನಾತ್ಮಕ ಧಾಳಿಗಳಾದಾಗ ಸಂಘಟನೆಯ ವತಿಯಿಂದ ಪ್ರತಿಭಟನೆ ದಾಖಲಿಸಲು ನಿರ್ಧರಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಬಟ್ಟಕಾಳಂಡ ಮುತ್ತಣ್ಣ, ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ, ಖಜಾಂಚಿ ಸಣ್ಣುವಂಡ ಕಿಸು ದೇವಯ್ಯ, ಸಹ ಕಾರ್ಯದರ್ಶಿಗಳಾದ ಚಿಮ್ಮಚಿರ ಪವಿತರಂಜನ್, ಚಾಮೆರ ಪ್ರಿಯಾ ದಿನೇಶ್, ಸಂಘಟನಾ ಕಾರ್ಯದರ್ಶಿ ಗಳಾದ ಕೋಟೆರ ಉದಯ್ ಪೂಣಚ್ಚ, ಚಿಟ್ಟೋಳಿರ ಶರತ್ ಸೋಮಣ್ಣ, ಕ್ರೀಡಾ ಕಾರ್ಯದರ್ಶಿ ಮಿನ್ನಂಡ ಪ್ರೀತ್ ಜೋಯಪ್ಪ, ಸಾಂಸ್ಕøತಿಕ ಕಾರ್ಯದರ್ಶಿ ಕೈಬುಲಿರ ನೀತು ಕುಶಾಲಪ್ಪ, ಸಮಿತಿ ಸದಸ್ಯರಾದ ಚಮ್ಮಟಿರ ಪ್ರವೀಣ್ ಉತ್ತಪ್ಪ, ಮಾಳೆಟಿರ ಅಜಿತ್ ಪೂವಣ್ಣ, ಕದ್ದಣಿಯಂಡ ವಂದನ ಚಿಣ್ಣಪ್ಪ ಅವರುಗಳು ಹಾಜರಿದ್ದರು.