ಮಡಿಕೇರಿ, ನ. 23: ಎಸ್‍ವೈಎಸ್ ಮತ್ತು ಎಸ್‍ಎಸ್‍ಎಫ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ತಾ. 29 ರಂದು ಹುಬ್ಬುರಸೂಲ್ ಸಮಾವೇಶವು ಎಮ್ಮೆಮಾಡುವಿನ ಅಸ್ಮಾಉಲ್ ಹುಸ್ನಾ ರಾತೀಬ್ ತಾಜುಲ್ ಉಲಮಾ ನಗರಿಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಸಂಯೋಜಕ ಅಬ್ದುಲ್ ರಹೀಮಾನ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ಅಂಗವಾಗಿ ಅಂದು ಮಧ್ಯಾಹ್ನ 3.30ಕ್ಕೆ ಸಾದಾತ್ ನಗರ ಮಸೀದಿಯಿಂದ ತಾಜುಲ್ ಉಲಮಾ ನಗರದವರೆಗೆ ಈದ್ ಮೀಲಾದ್ ಸಂದೇಶ ಜಾಥ ನಡೆಯಲಿದ್ದು, ಜಾಥಾದಲ್ಲಿ ಎಸ್‍ಎಸ್‍ಎಫ್ ಜಿಲ್ಲಾ ಉಪಾಧ್ಯಕ್ಷ ಶಾಫಿ ಸಅದಿ ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು. ಸಂಜೆ 5.30ಕ್ಕೆ ಸಯ್ಯಿದ್ ಕೋಯಮ್ಮ ತಂಙಳ್ ಧ್ವಜಾರೋಹಣ ನೆರವೇರಿಸಲಿದ್ದು, ಸಂಜೆ 6.30ಕ್ಕೆ ರಾತೀಬ್ ದುಆದ ನೇತೃತ್ವವನ್ನು ಅಬ್ದುಲ್ ಅಝೀಝ್ ತಂಙಳ್ ಅಲ್ ಹೈದರೂಸಿ ವಹಿಸಲಿದ್ದಾರೆ ಎಂದರು. ಸಮಾರೋಪ ಸಮಾರಂಭವನ್ನು ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಕೆ.ಎಂ.ಹುಸೈನ್ ಸಖಾಫಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ನಾಯಿಬ್ ಖಾಝಿಯಾದ ಕೆ.ಎ. ಮಹಮೂದ್ ಮುಸ್ಲಿಯಾರ್, ಸಯ್ಯಿದ್ ಇಲ್ಯಾಸ್, ಎರುಮಾಡು ತಂಞಳ್ ಅಲ್ ಹೈದರೂಸಿ, ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಕಿಲ್ಲೂರ್, ಇಬ್ರಾಹಿಂ ಸಖಾಫಿ ತಾತೂರ್ ಸೇರಿದಂತೆ ಇನ್ನಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾ ರೆಂದು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷ ಪೋಕೋಯ ತಂಙಳ್, ಎಸ್‍ಎಸ್‍ಎಫ್‍ನ ಎಮ್ಮೆಮಾಡು ಘಟಕದ ಕಾರ್ಯದರ್ಶಿ ಹಾರಿಸ್ ಮುಸ್ಲಿಯಾರ್ ಹಾಗೂ ಜಿಲ್ಲಾ ಎಸ್‍ಎಸ್‍ಎಫ್‍ನ ಶೌಕತ್ ಎಮ್ಮೆಮಾಡು ಉಪಸ್ಥಿತರಿದ್ದರು.