ಕೂಡಿಗೆ, ನ. 22 : ಹೆಬ್ಬಾಲೆಯ ಮಾದರಿ ಯುವಕ ಸಂಘ ಇವರ ವತಿಯಿಂದ ಶ್ರೀ ಬನಶಂಕರಿ ಅಮ್ಮನವರ ಹಬ್ಬದ ಪ್ರಯುಕ್ತ ಗ್ರಾಮೋತ್ಸವ 2019 ನಡೆಯಲಿದೆ. ಗ್ರಾಮೋತ್ಸವದ ಅಂಗವಾಗಿ ಆಟೋಟ ಸ್ಪರ್ಧೆಗಳು ಮತ್ತು ವಿವಿಧ ಪಂದ್ಯಾವಳಿಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ತಾ. 23 ರಂದು (ಇಂದಿನಿಂದ) ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ, ಪುರುಷರ ವಾಲಿಬಾಲ್ ಪಂದ್ಯಾವಳಿ, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿ, ವಿಶೇಷವಾಗಿ ಎತ್ತಿನ ಗಾಡಿ ಓಟದ ಸ್ಪರ್ಧೆ ಸೇರಿದಂತೆ ಪುರುಷರಿಗೆ ಮಹಿಳೆಯರಿಗೆ ಓಟ ಸ್ಪರ್ಧೆ ಹಾಗೂ ಅಲಂಕಾರ ಸ್ಪರ್ಧೆಗಳು ನಡೆಯಲಿವೆ. ತಾ. 27ರಂದು ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಮಾದರಿ ಯುವಕ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.