ಮಡಿಕೇರಿ, ನ. 22: ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ ಓದುತ್ತಿರುವ ವಿದ್ಯಾರ್ಥಿಗಳು ಶಿಷ್ಯ ವೇತನಕ್ಕಾಗಿ ಕಡ್ಡಾಯವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತಾಧಿಕಾರಿಗಳಿಗೆ ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯ ಸೂಚಿಸಿದ್ದಾರೆ.
ನಗರದ ಜಿ.ಪಂ. ನೂತನ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ವಿವಿಧ ಯೋಜನೆಗಳಡಿ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಇ-ಆಡಳಿತದಲ್ಲಿ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, (hಣಣಠಿs://ssಠಿ.ಞಚಿಡಿಟಿಚಿಣಚಿಞಚಿ. gov.iಟಿ), ವಿದ್ಯಾರ್ಥಿಯ ಆಧಾರ್ ಜೋಡಣೆ ಹೊಂದಿರುವ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಯಾಗಲಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲೇಜಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ತಿಳಿಸಿದರು.
ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ತಾಂತ್ರಿಕ ಶಿಕ್ಷಣ ಇಲಾಖೆ, ವೈದ್ಯಕೀಯ ಶಿಕ್ಷಣ ಮತ್ತು ಆಯುಷ್ ಇಲಾಖೆಗಳ ಮೂಲಕ ವಿದ್ಯಾರ್ಥಿ ವೇತನಕ್ಕೆ ಇ-ಆಡಳಿತ ಕೇಂದ್ರ ಏಕೀಕೃತ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, ವಿದ್ಯಾರ್ಥಿ ವೇತನ ತಂತ್ರಾಂಶವು ವಿದ್ಯಾರ್ಥಿಯ ಆಧಾರ್ ಜೋಡಣೆಗೊಂಡಿರುವ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಯಾಗುತ್ತದೆ ಎಂದರು.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ತಾ. 30 ಕೊನೆಯ ದಿನವಾಗಿದ್ದು, ಕಾಲೇಜಿನ ಪ್ರಾಂಶು ಪಾಲರು, ಆಡಳಿತ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ವಿದ್ಯಾರ್ಥಿಗಳ ಶಿಷ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಅವರು ತಿಳಿಸಿದರು. ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ಮಾಹಿತಿ ನೀಡಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸಹಕಾರ ನೀಡುವಂತೆ ಕೋರಿದರು.
ಎಸ್‍ಎಸ್‍ಪಿ ತಂತ್ರಾಂಶದಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕು. ಆಧಾರ್ ವಿವರಗಳು ಮತ್ತು ಮೊಬೈಲ್ ಸಂಖ್ಯೆಯನ್ನು ಎಸ್‍ಎಸ್‍ಪಿ ಖಾತೆಯನ್ನು ರಚಿಸಬೇಕು. ಕಾಲೇಜು ಮತ್ತು ಕೋರ್ಸ್ ವಿವರಗಳನ್ನು ನಮೂದಿಸ ಬೇಕು. ಪೋಷಕರ/ ಪಾಲಕರ ಆಧಾರ್ ವಿವರಗಳನ್ನು ನಮೂದಿಸ ಬೇಕು. ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ನಮೂದಿ ಸಬೇಕು. ಈ ದೃಢೀಕರಿಸಿದ ದಾಖಲೆ ಗಳ ಸಂಖ್ಯೆಯನ್ನು ನಮೂದಿಸಬೇಕು ಎಂದು ಮನವಿ ಮಾಡಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಅವರು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಥಿಗಳ ದಾಖಲೆ ಗಳನ್ನು ದೃಢೀಕರಿಸಿಕೊಳ್ಳಬೇಕು. ವಿದ್ಯಾರ್ಥಿ ವೇತನವನ್ನು ಪಡೆಯಲು ಆಧಾರ್ ಸಂಖ್ಯೆಯು ಬ್ಯಾಂಕ್ ಖಾತೆಗೆ ಜೋಡಣೆಯಾಗಿದೆ ಎಂಬದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಜಿ. ಕೆಂಚಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶೇಖರ್, ಮಂಜುನಾಥ್, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಆಡಳಿತಾಧಿ ಕಾರಿಗಳು ಇತರರು ಇದ್ದರು.
ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದ ಯುಆರ್‍ಎಲ್ hಣಣಠಿs://ssಠಿ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಬೇಕು. ಇ-ದೃಢೀಕರಣ ಎನ್ನುವುದು ಇ-ದೃಢೀಕರಣ ಸಾಫ್ಟ್‍ವೇರ್ ಬಳಸಿ ದೃಢೀಕರಣ ಅಧಿಕಾರಿಗಳಿಂದ ದೃಢೀಕೃತ ದಾಖಲೆ ಪಡೆಯುವ ವಿದಾನವಾಗಿದೆ. ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಒಂದು ಅಥವಾ ಹೆಚ್ಚಿನ ದಾಖಲೆಗಳ ದೃಢೀಕರಣ ಬೇಕಾಗಬಹುದು. ಕೋರ್ಸ್‍ಗೆ ಸಂಬಂಧಿಸಿದಂತೆ ದೃಢೀಕರಿಸಿಕೊಳ್ಳಬೇಕಾದ ದಾಖಲೆಗಳ ಪಟ್ಟಿಗಾಗಿ ಪೋರ್ಟಲ್ ಅನ್ನು ಪರಿಶೀಲಿಸಿ. ಅಧ್ಯಯನ/ ಬೊನಾಫೈಡ್ ಪ್ರಮಾಣಪತ್ರ, ಶುಲ್ಕ ರಶೀದಿ, ಹಾಸ್ಟೆಲ್ ಪ್ರವೇಶಾತಿ ಪ್ರಮಾಣಪತ್ರ, ಅಂಕಪಟ್ಟಿ, ರಕ್ಷಣಾ ಸಿಬ್ಬಂದಿಯ ರಕ್ತ ಸಂಬಂಧಿಯಾದಲ್ಲಿ ರಕ್ಷಣಾ ಸಿಬ್ಬಂಧಿ ಸೇವಾ ಪ್ರಮಾಣಪತ್ರ, ಪೋಷಕರ ವೇತನ ಪ್ರಮಾಣಪತ್ರ.
ದಾಖಲೆಗಳನ್ನು ಇ-ದೃಢೀಕರಿಸಿಕೊಳ್ಳುವದು ಹೇಗೆ? hಣಣಠಿs://ssಠಿ.ಞಚಿಡಿಟಿಚಿಣಚಿಞಚಿ.gov.iಟಿ ಗೆ ಭೇಟಿ ನೀಡಿ. ಇ-ದೃಢೀಕರಣ ಲಿಂಕ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಆಧಾರ್ ವಿವರಗಳನ್ನು ನಮೂದಿಸಿ, ನಿಮ್ಮ ಕಾಲೇಜು ಮತ್ತು ಕೋರ್ಸ ವಿವರಗಳನ್ನು ನಮೂದಿಸಿ, ವಿದ್ಯಾರ್ಥಿ ನಿಲಯ ದಾಖಲೆಗಾಗಿ, ಹಾಸ್ಟೆಲ್ ವಿವರಗಳನ್ನು ನಮೂದಿಸಿ, ದೃಢೀಕರಿಸಬೇಕಾಗಿರುವ ದಾಖಲೆಯ ವಿವರಗಳನ್ನು ನಮೂದಿಸಿ ನಂತರ ಅಪ್‍ಲೋಡ್ ಮಾಡಿ, ಆನ್‍ಲೈನ್ ಅರ್ಜಿಯನ್ನು ಸಲ್ಲಿಸಿದ ನಂತರ ದಾಖಲೆಯ ದೃಢೀಕರಣಕ್ಕಾಗಿ ಮೂಲ ದಾಖಲೆಗಳೊಂದಿಗೆ ಇ-ದೃಢೀಕರಣ ಅಧಿಕಾರಿಯನ್ನು ಭೇಟಿಮಾಡಿ, ಸಹಿ ಮಾಡಿದ ಆಧಾರ್ ಅನುಮತಿ ಪತ್ರವನ್ನು ಇ-ದೃಢೀಕರಣ ಅಧಿಕಾರಿಗೆ ಸಲ್ಲಿಸಿ, ಐಟಿಐ, ಪಿಯುಸಿ, ಪಾಲಿಟೆಕ್ನಿಕ್, ಡಿ ಫಾರ್ಮಾ, ಡಿಪ್ಲೊಮಾ ಇನ್ ನರ್ಸಿಂಗ್, ಡಿ ಎಡ್ ಪ್ಯಾರಾಮೆಡಿಕಲ್ ಡಿಪ್ಲೊಮಾ ಮತ್ತು ಜಿಟಿಟಿಸಿ ವಿದ್ಯಾರ್ಥಿಗಳಿಗೆ- ವಸತಿನಿಲಯ ಘೋಷಣೆ ಪ್ರಮಾಣಪತ್ರಕ್ಕೆ ಮಾತ್ರ ಇ- ದೃಢೀಕರಣದ ಅಗತ್ಯವಿದೆ. ಖಾಸಗಿ, ಕಾಲೇಜು ನಿರ್ವಹಿಸುವ ವಸತಿ ನಿಲಯಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ವಸತಿನಿಲಯ ಘೋಷಣೆ ಪ್ರಮಾಣ ಪತ್ರವನ್ನು ಸಂಬಂಧಿಸಿದ ದೃಢೀಕರಣ ಅಧಿಕಾರಿ ಗಳಿಂದ ದೃಢೀಕರಿಸಿಕೊಳ್ಳಬೇಕು.
ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ರಾಜ್ಯದ ನಿವಾಸಿಯಾಗಿರಬೇಕು. 10 ನೇ ತರಗತಿಯ ನಂತರದ ಯಾವುದೇ ಕೋರ್ಸಿನಲ್ಲಿ ಅಧ್ಯಯನ ಮಾಡುತ್ತಿರಬೇಕು. ವಿದ್ಯಾರ್ಥಿಯ ಕುಟುಂಬದ ಆದಾಯವು ಅರ್ಹ ಮಿತಿಯಲ್ಲಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಇತರೆ ಹಿಂದುಳಿದ ವರ್ಗಗಳು, ಕೇಂದ್ರ ಸರ್ಕಾರದ ಪಟ್ಟಿಯಲ್ಲಿರುವ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗ, ರಕ್ಷಣಾ ಸಿಬ್ಬಂದಿಯ ಸಂಬಂಧಿ, ಅರ್ಹತಾ ಮಾನದಂಡ ಗಳನ್ನು ತಿಳಿಯಲು ಪೋರ್ಟಲ್‍ಗೆ ಭೇಟಿ ನೀಡಿ.
ಎಸ್‍ಎಸ್‍ಪಿ ತಂತ್ರಾಂಶದಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? hಣಣಠಿs://ssಠಿ.ಞಚಿಡಿಟಿಚಿಣಚಿಞಚಿ.gov.iಟಿ ಗೆ ಭೇಟಿ ನೀಡಿ. ಆಧಾರ್ ವಿವರಗಳು ಮತ್ತು ಸಂಖ್ಯೆಯೊಂದಿಗೆ ಎಸ್‍ಎಸ್‍ಪಿ ಖಾತೆಯನ್ನು ರಚಿಸಿ, ಕಾಲೇಜು ಮತ್ತು ಕೋರ್ಸ್ ಆಯ್ಕೆ ಮಾಡಿ, ಪೋಷಕರ/ ಪಾಲಕರ ಆಧಾರ್ ವಿವರಗಳನ್ನು ನಮೂದಿಸಿ, ಜಾತಿ ಆದಾಯ ಪ್ರಮಾಣಪತ್ರದ ಆರ್.ಡಿ.ಸಂಖ್ಯೆಗಳನ್ನು ನಮೂದಿಸಿ, ಇ-ದೃಢೀಕರಿಸಲಾದ ದಾಖಲೆಗಳ ಸಂಖ್ಯೆ ನಮೂದಿಸಿ, ಬಳಕೆದಾರ ಕೈಪಿಡಿ, ವಿಡಿಯೋ ಟ್ಯುಟೋರಿಯಲ್ ಮತ್ತು ಪುನರಾವರ್ತಿತ ಪ್ರಶ್ನೆಗಳಿಗಾಗಿ ತಂತ್ರಾಂಶಕ್ಕೆ ಭೇಟಿ ನೀಡಿ. ನೀವು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಮೊದಲು ದಯವಿಟ್ಟು ನಿಮ್ಮ ದಾಖಲೆಗಳನ್ನು ಇ-ದೃಢೀಕರಿಸಿಕೊಳ್ಳಿ, ವಿದ್ಯಾರ್ಥಿ ವೇತನವನ್ನು ಪಡೆಯಲು ಆಧಾರ್ ಸಂಖ್ಯೆಯು ನಿಮ್ಮ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲಾಗಿ ದೆಯೇ ಎಂದು ಖಚಿತಪಡಿಸಿಕೊಳ್ಳಿ ಹಾಗೂ ಹೆಚ್ಚಿನ ಮಾಹಿತಿಗೆ 080-44554455 ಸಂಪರ್ಕಿಸಬಹುದಾಗಿದೆ.