ಮಡಿಕೇರಿ, ನ. 21: ಆದರ್ಶಗಳ ಬದ್ಧತೆಯ ಮೂಲಕ ಕನಸುಗಳನ್ನು ಕಟ್ಟಿ ಅದನ್ನು ಕೃತಿಗಳ ಮೂಲಕ ಆತ್ಮಾವಲೋಕನ ಮಾಡಲು ಸಾಧ್ಯವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಹೇಳಿದರು.

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಮೈಸೂರು ರಾಜ್ ಪ್ರಕಾಶನ ಪ್ರಕಟಿಸಿದ ವಿಶ್ರಾಂತ ಪ್ರಿನ್ಸಿಪಾಲ್, ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲರ ‘ಬೊಗಸೆ ತುಂಬ ಕನಸು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಪೀಠದ ಸ್ಥಾಪಕಾಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕೃತಿ ಪರಿಚಯ ಮಾಡಿ ಮಾತನಾಡಿ, ಭಾಷೆಗಳ ಬೆಳವಣಿಗೆಗ ಸಾಹಿತ್ಯ ಕೃತಿಗಳ ಕೊಡುಗೆ ಅನನ್ಯ ಎಂದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಉಜಿರೆ ಎಸ್‍ಡಿಎಂಸಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ನಿರ್ದೇಶಕರುಗಳಾದ ಶೋಭಾ ಚಿದಾನಂದ ಮತ್ತು ಆರ್ಕಿಟೆಕ್ಟ್ ಅಕ್ಷಯ ಕುರುಂಜಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಪದವಿ ಕಾಲೇಜು ಪ್ರಿನ್ಸಿಪಾಲ್ ಡಾ.ಗಿರಿಧರ ಗೌಡ, ಹಿರಿಯ ವಿದ್ಯಾರ್ಥಿ ಸಂಘದ ಮಾರ್ಗದರ್ಶಕಿ ಪೆÇ್ರ.ರತ್ನಾವತಿ ಕೇರ್ಪಳ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಪೂವಪ್ಪ ಗೌಡ, ವಿದ್ಯಾರ್ಥಿನಾಯಕ ಕೃಷ್ಣಪ್ರಸಾದ್ ಉಪಸ್ಥಿತರಿದ್ದರು.