ಮಡಿಕೇರಿ, ನ. 21: ಪ್ರಕರಣ ವೊಂದರಲ್ಲಿ ಇಲ್ಲಿನ ಕಾರಾಗೃಹದಲ್ಲಿ ವಿಚಾರಣೆ ಎದುರಿಸುತ್ತಿದ್ದ ಆರೋಪಿ ಯೊಬ್ಬ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಇಂದು ಸಂಭವಿಸಿದೆ. ಹುಣಸೂರು ತಾಲೂಕು ದೊಡ್ಡ ಹೆಬ್ಬೂರು ಗ್ರಾಮದ ಹಣಕೋಡು ಎಂಬಲ್ಲಿನ ನಿವಾಸಿಯಾಗಿರುವ ಸಿದ್ಧರಾಜು (22) ಎಂಬಾತ ಸಂಶಯಾಸ್ಪದ ರೀತಿ ಸಾವನ್ನಪ್ಪಿರುವ ಬಗ್ಗೆ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆತನನ್ನು ಜೈಲು ಸಿಬ್ಬಂದಿ ಜಿಲ್ಲಾ ಆಸ್ಪತ್ರೆಗೆ ಕರೆ ತರುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾಗಿ ತಿಳಿದು ಬಂದಿದೆ.