ಮಡಿಕೇರಿ: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 102ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ದೇಶಕ್ಕೆ ಇಂದಿರಾಗಾಂಧಿ ಅವರು ನೀಡಿದ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.

ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು ಅವರು ಮಾತನಾಡಿ, ದೇಶದಲ್ಲಿ ಹಸಿರು ಕ್ರಾಂತಿಗೆ ನಾಂದಿ ಹಾಡಿದ ಇಂದಿರಾಗಾಂಧಿ ಅವರು ಆಹಾರ ಉತ್ಪನ್ನಗಳಲ್ಲಿ ಭಾರತೀಯರು ಸ್ವಾವಲಂಬಿಗಳಾಗಲು ಕಾರಣಕರ್ತರಾದರು ಎಂದು ಬಣ್ಣಿಸಿದರು. ವೀರಾಜಪೇಟೆ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಗೊಂಡು ಹಲವು ದಿನಗಳೇ ಕಳೆದಿದ್ದರೂ ಉದ್ಘಾಟನೆ ಮಾಡಿ ಜನರಿಗೆ ಅರ್ಪಿಸದೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿದರು. ಮುಂದಿನ 15 ದಿನಗಳೊಳಗೆ ಕ್ಯಾಂಟಿನ್ ಸೇವೆ ಆರಂಭಗೊಳ್ಳದಿದ್ದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಸೂರಜ್ ಎಚ್ಚರಿಕೆ ನೀಡಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ ಮಾತನಾಡಿ, ಇಂದಿರಾಗಾಂಧಿ ಅವರ ಧೀಮಂತ ನಡೆ ವಿಶ್ವದಲ್ಲೇ ಪರಿಣಾಮ ಬೀರಿದೆ. 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನವನ್ನು ಸದೆಬಡೆದು ಜಾಗತಿಕ ಮಟ್ಟದಲ್ಲಿ ಉಕ್ಕಿನ ಮಹಿಳೆ ಎಂದು ಖ್ಯಾತಿ ಗಳಿಸಿದರು ಎಂದು ಬಣ್ಣಿಸಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಅಪ್ರು, ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮಂಡಿರ ಸದಾ ಮುದ್ದಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ನಗರಾಧ್ಯಕ್ಷ ಎ.ಜಿ.ರಮೇಶ್, ನಗರಸಭಾ ಮಾಜಿ ಸದಸ್ಯರುಗಳಾದ ಉದಯಕುಮಾರ್, ಕಟ್ರತನ ವೆಂಕಟೇಶ್, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷÀ ನೆರವಂಡ ಉಮೇಶ್, ಮಡಿಕೇರಿ ನಗರ ಸೇವಾದಳದ ಸಂಯೋಜಕಿ ಪ್ರೇಮಾ ಕೃಷ್ಣಪ್ಪ, ನಗರ ಸೇವಾದಳ ಅಧ್ಯಕ್ಷ ಕಾನಹಿತ್ಲು ಮೊಣ್ಣಪ್ಪ, ಎಸ್‍ಸಿ ಘಟಕದ ಮಡಿಕೇರಿ ನಗರಾಧ್ಯಕ್ಷ ಮುದ್ದುರಾಜು, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರಾಹುಲ್ ಮಾರ್ಷಲ್, ಬೂತ್ ಅಧ್ಯಕ್ಷÀ ಶೇಖ್ ಅಹಮದ್, ಮುಮ್ತಾಜ್, ಉಷಾ, ಹರ್ಷಿತ್ ಕನ್ಯಾನ, ರಾಣಿ, ಉಷಾ ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾನಹಿತ್ಲು ಮೊಣ್ಣಪ್ಪ ಸ್ವಾಗತಿಸಿ, ಸದಾ ಮುದ್ದಪ್ಪ ವಂದಿಸಿದರು. ಸೋಮವಾರಪೇಟೆ: ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಇಂದಿರಾಗಾಂಧಿ ಅವರ ಜನ್ಮ ದಿನವನ್ನು ಆಚರಿಸಲಾಯಿತು.

ಸಂಘದ ಅಧ್ಯಕ್ಷರಾದ ಹೆಚ್.ಎ. ನಾಗರಾಜ್ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಹೆಚ್.ಬಿ. ರಾಜಪ್ಪ, ಸಲಹೆಗಾರ ಪಳನಿಸ್ವಾಮಿ, ಸಂಚಾಲಕರಾದ ಹೆಚ್.ವಿ. ಗಿರೀಶ್ ಪದಾಧಿಕಾರಿಗಳಾದ ಕೆ.ಎಸ್. ಪ್ರಸನ್ನ, ಮನೋಜ್, ಅಜಯ್, ಪುನಿತ್, ಪ್ರಕಾಶ್, ಚನ್ನಯ್ಯ, ಹೆಚ್.ಬಿ. ನಾಗರಾಜ್, ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.