ಶ್ರೀಮಂಗಲ, ನ. 21: ಟಿ.ಶೆಟ್ಟಿಗೇರಿ ಗ್ರಾಮದ ಸಮಾಜ ಸೇವಕಿ ಕೈಬುಲಿರ ಪಾರ್ವತಿಬೋಪಯ್ಯ ಅವರು ಪಾಲಿಬೆಟ್ಟದ ವಿಶೇಷ ಅಗತ್ಯವಿರುವ ಮತ್ತು ವಿಕಲಚೇತನರ ಆಶ್ರಯಸಂಸ್ಥೆಯ ಚೇಷೆರ್ ಹೋಂ ಶಾಲೆಗೆ ಭೇಟಿ ನೀಡಿ ರೂ. 50 ಸಾವಿರ ಉದಾರ ಕೊಡುಗೆ ನೀಡಿದರು.

ಕೈಬುಲಿರ ಪಾರ್ವತಿಬೋಪಯ್ಯ ಅವರು ತಮ್ಮ ಪತಿ ಬೋಪಯ್ಯ ಅವರ ಹೆಸರಿನಲ್ಲಿ ಈ ಶಾಲೆಯ ಮಕ್ಕಳ ನೆರವಿಗಾಗಿ ರೂ. 50 ಸಾವಿರ ಚೆಕ್‍ನ್ನು ಸಂಸ್ಥೆಯ ಅಧ್ಯಕ್ಷೆ ಗೀತಾಚಂಗಪ್ಪ ಅವರಿಗೆ ನೀಡಿದರು.

ಪಾರ್ವತಿಬೋಪಯ್ಯ ತಮ್ಮ ಪತಿಯ ಜ್ಷಾಪಕಾರ್ಥವಾಗಿ ಟಿ.ಶೆಟ್ಟಿಗೇರಿಯ ಶಾಲೆ, ಕೊಡವ ಸಮಾಜ ಸೇರಿದಂತೆ ಇತರ ಸಂಘಸಂಸ್ಥೆಗಳಿಗೆ ಬಹಳಷ್ಟು ಉದಾರ ನೆರವು ನೀಡಿದ್ದು, ತಮ್ಮ ಮರಣದ ನಂತರ ಅಂಗಾಂಗವನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ಬರೆದುಕೊಟ್ಟಿದ್ದಾರೆ.

ಸಂದರ್ಭ ಸಮಾಜ ಸೇವಕ ಹಾಗೂ ವಕೀಲರಾದ ಮಚ್ಚಮಾಡ ಟಿ.ಕಾರ್ಯಪ್ಪ ಹಾಜರಿದ್ದರು.