ವೀರಾಜಪೇಟೆ, ನ. 21: ವೀರಾಜಪೇಟೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಡಿಸೆಂಬರ್ 24 ರಿಂದ 29 ರವರೆಗೆ ವೀರಾಜಪೇಟೆಯ ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಒಟ್ಟು 140 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಪಂದ್ಯಾಟದಲ್ಲಿ ಕಿಂಗ್ ಫಿಷರ್, ಮನ್ನಾ ಸೂಪರ್ ಕಿಂಗ್ಸ್, ರಾಯಲ್ ರಾಜಾತಾದ್ರಿಸ್, ಆದ್ಯ ಕ್ರಿಕೆಟರ್ಸ್, ಸ್ಪೈಸಸ್ ಇಲೆವೆನ್, ಎಂ.ವೈ.ಸಿ.ಸಿ., ಟೀಮ್ ಮಹಾಮೇಳ, ಟೀಮ್ ಸ್ಪಿರಿಟ್, ಲೀತಿನ್ ಕ್ರಿಕೆಟರ್ಸ್, ಕೌಬಾಯ್ಸ್, ರಾಯಲ್ ಫ್ರೆಂಡ್ಸ್, ರಿಶೇಪ್ ಚಾಲೆಂಜರ್ಸ್ ಒಟ್ಟು 12 ತಂಡಗಳು ಭಾಗವಹಿಸಲಿವೆ.