ಸೋಮವಾರಪೇಟೆ, ನ. 21: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್‍ನ ಕೊಡಗು ಜಿಲ್ಲಾ ಘಟಕದ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ಇಲ್ಲಿನ ಪತ್ರಿಕಾಭವನದಲ್ಲಿ, ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಸಾಲಿನ ಅಧ್ಯಕ್ಷರಾಗಿ ಮೂರ್ನಾಡಿನ ಶೇಕ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿಯಾಗಿ ಸೋಮವಾರಪೇಟೆಯ ಎಸ್.ಸಿ. ನಂದೀಶ್, ಕೋಶಾಧಿಕಾರಿಯಾಗಿ ಮಡಿಕೇರಿಯ ವಸಂತ್ ಕುಲಾಲ್, ಸಹ ಕಾರ್ಯದರ್ಶಿಯಾಗಿ ಮೂರ್ನಾಡಿನ ಸಜೀವ್, ಉಪಾಧ್ಯಕ್ಷರಾಗಿ ಮಡಿಕೇರಿಯ ಚಂದ್ರಶೇಖರ್, ಮಹಿಳಾ ಉಪಾಧ್ಯಕ್ಷರಾಗಿ ಜಾನಕಿ, ಜಿಲ್ಲಾ ಗೌರವಾಧ್ಯಕ್ಷರಾಗಿ ಮಂಜುನಾಥ್ ಅವರುಗಳನ್ನು ನೇಮಕ ಮಾಡಲಾಯಿತು.

ರಾಜ್ಯ ಸಮಿತಿ ಸದಸ್ಯರನ್ನಾಗಿ ಸೋಮವಾರಪೇಟೆಯ ನಂದೀಶ್, ಮಡಿಕೇರಿಯ ಅಫ್ರಪುನ್ನೀಸ್ ಸೇರಿದಂತೆ ಜಿಲ್ಲಾ ಸಮಿತಿಗೆ 6 ಮಂದಿಯನ್ನು ಆಯ್ಕೆ ಮಾಡಲಾಯಿತು.