ವೀರಾಜೇಟೆ, ನ. 20: ವೀರಾಜಪೇಟೆ ನಗರದಲ್ಲಿ ಇಲ್ಲಿನ ಪಟ್ಟಣ ಪಂಚಾಯಿತಿ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರ, ಸುಂಕದ ಕಟ್ಟೆಯಿಂದ ಮೀನುಪೇಟೆವರೆಗೆ 14ವರೆ ಕೋಟಿ ವೆಚ್ಚದಲ್ಲಿ ಮಾಡ ಹೊರಟಿರುವ ರಸ್ತೆ ಅಗಲೀಕರಣ ಯೋಜನೆಗೆ ಸಂಬಂಧಿಸಿದಂತೆ ತಾ. 5ರಂದು ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದ ಬೆನ್ನಲ್ಲೇ ಇದೀಗ ಮತ್ತೊಂದು ತಡೆಯಾಜ್ಞೆ ಜಾರಿಯಾಗಿದೆ.
ವೀರಾಜಪೇಟೆಯ ಹಿರಿಯ ವಕೀಲರು, ಪ.ಪಂ. ಮಾಜಿ ಅಧ್ಯಕ್ಷ ಎಂ.ಕೆ. ಪೂವಯ್ಯ ಮತ್ತು ಅವರ ಪುತ್ರ ಕರ್ನಾಟಕ ರಾಜ್ಯದ ಮಾಜಿ ಅಡಿಷನಲ್ ಅಡ್ವೋಕೇಟ್ ಜನರಲ್, ಸುಪ್ರೀಂಕೋರ್ಟ್ನ ವಕೀಲರಾದ ಸಜನ್ ಪೂವಯ್ಯ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ, ರಸ್ತೆ ಅಗಲೀಕರಣ ಮಾಡದಂತೆ ಪ್ರತ್ಯೇಕ ರಿಟ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಅದನ್ನು ಪುರಸ್ಕರಿಸಿ ಮತ್ತೊಂದು ತಡೆಯಾಜ್ಞೆಯನ್ನೂ ಜಾರಿ ಮಾಡಿದೆ.