ಗುಡ್ಡೆಹೊಸೂರು, ನ. 20: ಇಲ್ಲಿನ ಹಾರಂಗಿ ರಸ್ತೆಯಲ್ಲಿ ನಿಲ್ಲಿಸಿದ್ದ ಜೆ.ಸಿ.ಬಿ (ಕೆಎ.12. 0449)ನ ಹೈಡ್ರಾಲಿಕ್ ಪಂಪ್ ಮತ್ತು 70 ಲೀಟರ್ ಆಯಿಲ್‍ನ್ನು ಕಳೆದ ಎರಡು ದಿನಗಳ ಹಿಂದೆ ಕಳವು ಮಾಡಲಾಗಿದೆ. ಅನೇಕ ವರ್ಷಗಳಿಂದ ಹೇರೂರು ಗ್ರಾಮದ ಕುಟ್ಟ ಎಂಬವರು ತಮ್ಮ ವಾಹನವನ್ನು ಈ ಸ್ಥಳದಲ್ಲಿಯೇ ರಾತ್ರಿ ಸಮಯದಲ್ಲಿ ನಿಲ್ಲಿಸುತ್ತಿದ್ದರು. ತಾ.17ರ ಮುಂಜಾನೆ ಕಳ್ಳರು ಈ ಕೃತ್ಯವೆಸಗಿದ್ದು, ಸುಮಾರು 80 ಲಕ್ಷದ ಮಾಲನ್ನು ಕದ್ದೊಯ್ಯ ಲಾಗಿದೆ. ಕುಟ್ಟ ಅವರು ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.